ADVERTISEMENT

ಪೊಲೀಸ್‌ ಅಧಿಕಾರಿ ಹಣ ಪಡೆದ ವಿಡಿಯೊ ವೈರಲ್: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 4:52 IST
Last Updated 25 ಜನವರಿ 2022, 4:52 IST

ಬೀದರ್‌: ಭಾಲ್ಕಿಯಲ್ಲಿ ಅಂಗಡಿ ಮಾಲೀಕರೊಬ್ಬರಿಂದ ಸಿಪಿಐ ಹಣ ಪಡೆಯುತ್ತಿರುವ ವಿಡಿಯೊ ವೈರಲ್ ಆಗಿದ್ದು, ಸತ್ಯಾಸತ್ಯತೆ ಅರಿಯಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌. ನಾಗೇಶ ತನಿಖೆಗೆ ಆದೇಶಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಈವಿಡಿಯೊ ಉಲ್ಲೇಖಿಸಿ, ‘ಭಾಲ್ಕಿ ಪೊಲೀಸ್‌ ಅಧಿಕಾರಿಯ ಲಂಚಾವತಾರ ಹೆಚ್ಚಿದೆ’ ಎಂದು ಆರೋಪಿಸಿದ್ದಾರೆ.

‘ಸಿಪಿಐ ವಿರುದ್ಧ ಆರೋಪ ಬಂದಿರುವ ಕಾರಣ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಗೋಪಾಲ್‌ ಬ್ಯಾಕೋಡ್‌ ಅವರಿಗೆ ಸೂಚಿಸಿದ್ದು, ಈತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ADVERTISEMENT

‘ನಾಲ್ಕು ಟೈರ್‌ಗಳ ಖರೀದಿಗೆ ಹಣ ಕೊಟ್ಟಿದ್ದ ಸಿಪಿಐ ಎರಡು ಟೈರ್‌ ಖರೀದಿ ರದ್ದುಪಡಿಸಿದ್ದರಿಂದ ಅವರ ಹಣ ಮರಳಿಸಿದ್ದೇನೆ’ ಎಂದು ಅಂಗಡಿ ಮಾಲೀಕ ಹೇಳಿದರೆ, ‘ಯಾರಿಂದಲೂ ಲಂಚ ಪಡೆದಿಲ್ಲ’ ಎಂದು ಸಿಪಿಐ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.