ADVERTISEMENT

ಬೀದರ್‌| ‘ಪ್ರಜಾವಾಣಿ’ ವರದಿ ಪರಿಣಾಮ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:27 IST
Last Updated 20 ಫೆಬ್ರುವರಿ 2026, 5:27 IST
ಬೀದರ್‌ನ ಉದಗೀರ್‌ ರಸ್ತೆಯ ಮಡಿವಾಳೇಶ್ವರ ವೃತ್ತದಲ್ಲಿ ಗುರುವಾರ ‘ನೋ ಪಾರ್ಕಿಂಗ್‌’ ಸೂಚನಾ ಫಲಕ ಅಳವಡಿಸಲಾಯಿತು
ಬೀದರ್‌ನ ಉದಗೀರ್‌ ರಸ್ತೆಯ ಮಡಿವಾಳೇಶ್ವರ ವೃತ್ತದಲ್ಲಿ ಗುರುವಾರ ‘ನೋ ಪಾರ್ಕಿಂಗ್‌’ ಸೂಚನಾ ಫಲಕ ಅಳವಡಿಸಲಾಯಿತು   

ಬೀದರ್‌: ಜಿಲ್ಲಾ ಪೊಲೀಸ್‌ ಇಲಾಖೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ಗುರುವಾರ ಆರಂಭಿಸಿತು.

‘ಯೂ ಟರ್ನ್‌’, ‘ಪಾರ್ಕಿಂಗ್‌’, ‘ನೋ ಪಾರ್ಕಿಂಗ್‌’ಗೆ ಸಂಬಂಧಿಸಿದ ಸೂಚನಾ ಫಲಕಗಳನ್ನು ನಗರದಲ್ಲೆಡೆ ಅಳವಡಿಸಲಾಗುತ್ತಿದೆ.

‘ಅವೈಜ್ಞಾನಿಕ ಬ್ಯಾರಿಕೇಡ್‌ನಿಂದ ಹೆಚ್ಚಿದ ಅಪಘಾತ’ ‘ಯೂ ಟರ್ನ್‌’ ಫಲಕಗಳು ಹೆಚ್ಚಲಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಫೆಬ್ರುವರಿ 17ರಂದು ವರದಿ ಪ್ರಕಟಿಸಿತ್ತು. ‘ಯೂ ಟರ್ನ್‌’ ಫಲಕಗಳಿಲ್ಲದ ಕಾರಣ ವಾಹನಗಳು ಬೇಕಾಬಿಟ್ಟಿ ಸಂಚರಿಸುತ್ತಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಕೊನೆಗೂ ವರದಿಗೆ ಎಚ್ಚೆತ್ತ ಜಿಲ್ಲಾ ಪೊಲೀಸ್‌ ಇಲಾಖೆ ಈಗ ಎಲ್ಲೆಡೆ ಸೂಚನಾ ಫಲಕಗಳನ್ನು ಅಳವಡಿಸುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.