ಕೆರೆಯನ್ನು ಸ್ವಚ್ಚಗೊಳಿಸುತ್ತಿರುವ ನಗರಸಭೆಯ ಪೌರ ಕಾರ್ಮಿಕರು
ಬೀದರ್: ತ್ಯಾಜ್ಯದಿಂದ ಕಲುಷಿತಗೊಂಡಿದ್ದ ನಗರದ ಪಾಪನಾಶಿನಿ ಕೆರೆಯನ್ನು ನಗರಸಭೆಯವರು ಸ್ವಚ್ಛಗೊಳಿಸಿದ್ದಾರೆ.
ನಗರಸಭೆಯ ಪೌರ ಕಾರ್ಮಿಕರು ಮತ್ತು ಜೆಸಿಬಿಯಿಂದ ತ್ಯಾಜ್ಯವನ್ನು ಹೊರತೆಗೆದು ವಾಹನಗಳಲ್ಲಿ ಬೇರೆಡೆ ಸ್ಥಳಾಂತರಿಸಲಾಗಿದೆ. ಈಗ ಕೆರೆ ಮೊದಲಿನಂತೆ ಸ್ವಚ್ಛವಾಗಿ ಕಂಗೊಳಿಸುತ್ತಿದೆ.
‘ವಿಷವಾದ ಪಾಪನಾಶಿನಿ ಕೆರೆ ಒಡಲು’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಗುರುವಾರ (ಫೆ.20) ವರದಿ ಪ್ರಕಟಿಸಿತ್ತು. ಕೆರೆ ಮಲಿನಗೊಂಡು ಅಸಂಖ್ಯ ಮೀನುಗಳು ಮೃತಪಟ್ಟಿದ್ದವು. ದುರ್ನಾತ ಬೀರಿತ್ತು. ವರದಿ ಬೆನ್ನಲ್ಲೇ ನಗರಸಭೆ ಸ್ವಚ್ಛತಾ ಕಾರ್ಯ ಕೈಗೊಂಡಿದೆ.
ಪ್ರಜಾವಾಣಿ ವರದಿ
‘ಕೆರೆಗೆ ಚರಂಡಿ ನೀರು ಸೇರುತ್ತಿಲ್ಲ ಎನ್ನುವುದು ಪರಿಶೀಲನೆಯಿಂದ ಗೊತ್ತಾಗಿದೆ. ಹೀಗಿದ್ದರೂ ಅಲ್ಲಿರುವ ಮೀನುಗಳು ಏಕೆ ಸತ್ತಿವೆ ಎನ್ನುವುದನ್ನು ಪರೀಕ್ಷಿಸಿ ಮಾಹಿತಿ ಕೊಡಬೇಕೆಂದು ಮೀನುಗಾರಿಕೆ ಇಲಾಖೆಗೆ ಪತ್ರ ಬರೆಯಲಾಗಿದೆ. ಕೆರೆಯಲ್ಲಿ ಪೂಜಾ ವಸ್ತುಗಳು, ಅಲಂಕಾರಿಕ ವಸ್ತುಗಳನ್ನು ಸಾರ್ವಜನಿಕರು ಚೆಲ್ಲಬಾರದು. ಜನ ಸಾಮಾಜಿಕ ಹೊಣೆಗಾರಿಕೆ ಅರಿತುಕೊಳ್ಳಬೇಕು. ಶೀಘ್ರದಲ್ಲೇ ಅಲ್ಲಿ ಇಬ್ಬರು ಪೊಲೀಸರನ್ನು ನಿಯೋಜಿಸಿ ಇದಕ್ಕೆ ಕಡಿವಾಣ ಹಾಕಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.