ADVERTISEMENT

ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳಿ: ಪಿಎಸ್‍ಐ ಚಂದ್ರಶೇಖರ

ಕಮಲನಗರದಲ್ಲಿ ಶ್ರದ್ಧೆ, ಭಕ್ತಿಯ ರಾಮನವಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 13:18 IST
Last Updated 6 ಏಪ್ರಿಲ್ 2025, 13:18 IST
ಕಮಲನಗರದ ಮಿನಿ ಬಸ್‌ ತಂಗುದಾಣದ ಮುಂಭಾಗದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು
ಕಮಲನಗರದ ಮಿನಿ ಬಸ್‌ ತಂಗುದಾಣದ ಮುಂಭಾಗದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು    

ಕಮಲನಗರ: ‘ಪ್ರತಿಯೊಬ್ಬರೂ ಶ್ರೀರಾಮನ ಆದರ್ಶ ವ್ಯಕ್ತಿತ್ವ ಹಾಗೂ ಅವರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ’ ಎಂದು ಪಿಎಸ್‍ಐ ಚಂದ್ರಶೇಖರ ನಿರ್ಣೆ ಹೇಳಿದರು.

ಪಟ್ಟಣದ ಮಿನಿ ಬಸ್‌ ತಂಗುದಾಣದ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ರಾಮನವಮಿ ಕಾರ್ಯಕ್ರಮದ ಅಂಗವಾಗಿ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

‘ರಾಮನ ಜೀವನ ಅತ್ಯಂತ ಪವಿತ್ರತೆಯಿಂದ ಕೂಡಿದ್ದು, ರಾಮನ ಮೇಲೆ ಹಿಂದೂಗಳು ಶ್ರದ್ಧೆ, ವಿಶ್ವಾಸ, ನಂಬಿಕೆ ಅಪಾರವಾಗಿದೆ. ಅವರ ಮೇಲೆ ಶ್ರದ್ಧೆ ಇಟ್ಟು ನಡೆದಾಗ ನಮ್ಮೆಲ್ಲರ ಬದುಕು ಪಾವನವಾಗುತ್ತದೆ ಮತ್ತು ಸುಂದರವಾಗುತ್ತದೆ’ ಎಂದರು.

ADVERTISEMENT

ಸಿದ್ದಯ್ಯಸ್ವಾಮಿ ರಂಡ್ಯಾಳ, ಗ್ರಾ.ಪಂ.ಸದಸ್ಯರಾದ ಬಾಲಾಜಿ ತೇಲಂಗ, ಸಂತೋಷ ಬಿರಾದಾರ, ನಿವೃತ್ತ ಪ್ರಾಚಾರ್ಯ ಎಸ್.ಎನ್.ಶಿವಣಕರ, ಸಂತೋಷ ಸುಲಾಕೆ, ಬಾಲಾಜಿ ಬಿರಾದಾರ, ಅವಿನಾಶ ಶಿವಣಕರ, ದತ್ತು ತೇಲಂಗ, ಶೈಲೇಶ ಶಿವಣಕರ, ಜಯಂತಿ ಸಮಿತಿ ಅಧ್ಯಕ್ಷ ಸಾಯಿಕುಮಾರ ತೇಲಂಗ, ಬಸವರಾಜ ತಾಂಬೂಲಿ, ಅಜಯ ರಾಠೋಡ, ಸೂರಜ್‌ ಗಾಯಕವಾಡ, ವೈಭವ ಪಾಟೀಲ್, ರೂಪೇಶ ನಿಟ್ಟೂರೆ, ನಾಗೇಶ ಬಿರಾದಾರ, ಅರುಣ ವಡೆಯಾರ, ಶಿವರಾಜ ಹಾಗೂ ಇನ್ನಿತರರು ಹಾಜರಿದ್ದರು.

ಕಮಲನಗರದ ರೇಲ್ವೆ ಗೇಟ್‌ ಬಳಿಯ ಹನುಮಾನ ಮಂದಿರದಲ್ಲಿ ಶ್ರೀರಾಮ ನವಮಿ ನಿಮಿತ್ತ ಭಾನುವಾರ ಬೆಳಿಗ್ಗೆಯಿಂದ ಪೂಜೆ ಹಾಗೂ ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ ನಡೆಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.