ADVERTISEMENT

ಹುಲಸೂರ: ಪಿಡಿಒಗಳಿಗೆ ಹೆಚ್ಚುವರಿ ಕಚೇರಿ ಕಾರ್ಯಭಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:12 IST
Last Updated 13 ನವೆಂಬರ್ 2025, 6:12 IST
ಹುಲಸೂರ ತಾಲ್ಲೂಕಿನ ಮಿರಖಲ ಗ್ರಾಮ ಪಂಚಾಯಿತಿ ಕಚೇರಿ
ಹುಲಸೂರ ತಾಲ್ಲೂಕಿನ ಮಿರಖಲ ಗ್ರಾಮ ಪಂಚಾಯಿತಿ ಕಚೇರಿ   

ಹುಲಸೂರ: ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂಬ ಮಾತಿದೆ. ಆದರೆ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ತಾಲ್ಲೂಕಿನ 7 ಗ್ರಾಮ ಪಂಚಾಯಿತಿಗಳ ಪೈಕಿ 5 ಪಂಚಾಯಿತಿಗಲ್ಲಿ ಪಿಡಿಒ ಇಲ್ಲ. ಬೇಲೂರ, ತೊಗಲುರ, ಗಡಿಗೌಡಗಾಂವ್, ಹುಲಸೂರ, ಮೀರಖಲ ಗ್ರಾಮಗಳಲ್ಲಿ ಪಿಡಿಒ ಇಲ್ಲದ ಕಾರಣ ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್-2 ಕಾರ್ಯದರ್ಶಿ ಅವರಿಗೆ ಪಂಚಾಯಿತಿಗಳಿಗೆ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಒಬ್ಬ ಅಧಿಕಾರಿ ಎರಡೆರಡು ಪಂಚಾಯಿತಿ ನಿರ್ವಹಿಸಬೇಕಿರುವ ಕಾರಣ, ಆಡಳಿತ ಯಂತ್ರದ ವೇಗ ಕುಂಠಿತವಾಗಿದೆ.

ಕಾಯಂ ಅಧಿಕಾರಿ ನೇಮಕವಾದರೆ ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿ, ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಜನಸಾಮಾನ್ಯರ ಕೆಲಸ-ಕಾರ್ಯಗಳು ಸಕಾಲಕ್ಕೆ ನಡೆಯುತ್ತದೆ. ಆದರೆ, ತಾಲ್ಲೂಕಿನ ಐದು ಪ್ರಮುಖ ಪೂರ್ಣಾವಧಿ ಅಧಿಕಾರಿ ಇಲ್ಲ. ಇಬ್ಬರು ಪಿಡಿಒಗಳು ಈ ಗ್ರಾಮಗಳೂ ಒಳಗೊಂಡಂತೆ 4 ಗ್ರಾಮ ಪಂಚಾಯಿತಿಗಳ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ. ಸಕಾಲಕ್ಕೆ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ADVERTISEMENT
ಕಾಯಂ ಪಿಡಿಒ ನೇಮಕ ವಿಚಾರ ಸರ್ಕಾರದ ಹಂತದಲ್ಲಿದೆ. ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್-1 ಕಾರ್ಯದರ್ಶಿ ಇದ್ದರೆ ಅವರನ್ನೇ ಪಿಡಿಒ ಆಗಿ ನೇಮಿಸಲು ಅವಕಾಶವಿದೆ. ಅವರನ್ನು ನೇಮಿಸಲಾಗಿದೆ.
ಮಹಾದೇವ ಜಮ್ಮು, ತಾಲ್ಲೂಕು ಪಂಚಾಯಿತಿ ಇಒ

ತಾಲ್ಲೂಕು ಕೇಂದ್ರದಿಂದ ಕೆಲವು ಗ್ರಾಮ ಪಂಚಾಯಿತಿಗಳು 22 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿವೆ. ಪಿಡಿಒಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದರಿಂದ ಎರಡು ಕಡೆ ಓಡಾಡಬೇಕಿದ್ದು, ಪೂರ್ಣ ಪ್ರಮಾಣದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ನಿಯೋಜಿತ ಪಿಡಿಒಗಳು ಕೆಲಸದ ಒತ್ತಡದ ನಡುವೆ ಎರಡೂ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯ ನಿರ್ವಹಿಸಬೇಕಿದೆ. ಇದರಿಂದ ಮಾನಸಿಕವಾಗಿ ಕುಗ್ಗಿದ್ದೇವೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.