ADVERTISEMENT

ಎಸ್‌ಡಿಎಂಸಿ ಪಾತ್ರ ದೊಡ್ಡದು: ಗುಮ್ಮೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:32 IST
Last Updated 5 ಡಿಸೆಂಬರ್ 2022, 4:32 IST
ಭಾಲ್ಕಿ ತಾಲ್ಲೂಕಿನ ಬೀರಿ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‍ಡಿಎಂಸಿಯ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಭಾಲ್ಕಿ ತಾಲ್ಲೂಕಿನ ಬೀರಿ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‍ಡಿಎಂಸಿಯ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು   

ಭಾಲ್ಕಿ: ‘ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಹೊಣೆಗಾರಿಕೆ ದೊಡ್ಡದು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಸ್ವಾಭಿಮಾನಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಗುಮ್ಮೆ ಹೇಳಿದರು.

ತಾಲ್ಲೂಕಿನ ಬೀರಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಎಸ್‌ಡಿಎಂಸಿ ನೂತನ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ADVERTISEMENT

ಎಸ್‍ಡಿಎಂಸಿ ನೂತನ ಅಧ್ಯಕ್ಷ ಹಣಮಂತ ಕಾರಬಾರಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಶಾಲೆಯ ಮುಖ್ಯಶಿಕ್ಷಕಿ ಜಗದೇವಿ ಚಲುವಾ ಅಧ್ಯಕ್ಷತೆ ವಹಿಸಿದ್ದರು. ಇಂದುಮತಿ ಕಲ್ಲೂರೆ ಸ್ವಾಗತ ಗೀತೆ ಹಾಡಿದರು. ಶಿಕ್ಷಣ ಸಂಯೋಜಕ ಸಹಾದೇವ ಗೌಡಗಾವೆ, ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಕಾಂತ, ಗ್ರಾಮದ ಪ್ರಮುಖರಾದ ಸಚಿನ್, ಮೇಘರಾಜ, ಬಸವರಾಜ, ವೀರೇಶ, ದೀಪಕ್, ಸಂಜುಕುಮಾರ, ವೀರೇಶ, ಪಪ್ಪು ಮಹಾರಾಜ ಹಾಗೂ ಸ್ವಾಮಿದಾಸ್ ಇದ್ದರು. ರಾಬಿನ್ ಸ್ವಾಗತಿಸಿದರು. ಮಹಾದೇವ ನಿರೂಪಿಸಿದರು. ಭಗವಾನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.