
ಭಾಲ್ಕಿ: ‘ಫೆ.19 ರಂದು ಸಾರ್ವಜನಿಕ ಸಕಲ ಮರಾಠಾ ಸಮಿತಿಯ ವತಿಯಿಂದ ನಡೆಯಲಿರುವ ಶಿವಾಜಿ ಜಯಂತಿಯನ್ನು ಸಮಾಜದ ಎಲ್ಲಾ ಜನರನ್ನು ಆಹ್ವಾನಿಸಿ ಅದ್ದೂರಿಯಾಗಿ ಆಚರಿಸಲಾಗುವುದು’ ಎಂದು ಸಮಿತಿಯ ಮುಖಂಡ ಅನೀಲಕುಮಾರ ಬಿ.ಸಿಂಧೆ ಹೇಳಿದರು.
ಪಟ್ಟಣದ ಭಾಲ್ಕೇಶ್ವರ ಮಂದಿರದಲ್ಲಿ ಗುರುವಾರ ಸಾರ್ವಜನಿಕ ಸಕಲ ಮರಾಠಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಶಿವಾಜಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಹಳೆಯ ಕಹಿ ಘಟನೆಗಳನ್ನು ಮರೆತು ಎಲ್ಲರೂ ಒಟ್ಟಿಗೆ ಸೇರಿ ಸಾರ್ವಜನಿಕ ಶಿವಾಜಿ ಜಯಂತಿ ಆಚರಿಸಲಾಗುವುದು. ಎಲ್ಲಾ ಹಿಂದೂ ಸಮಾಜದ ಜನಾಂಗದವರನ್ನು ಆಹ್ವಾನಿಸಲಾಗುವುದು’ ಎಂದರು.
ಸಕಲ ಮರಾಠಾ ಸಮಾಜ ಶಿವಾಜಿ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಡಾ. ಗುಂಡೇರಾವ್ ಶೇಡೋಳೆ ಮಾತನಾಡಿ, ‘ಪ್ರಸ್ತುತ ಸಾಲಿನಲ್ಲಿ ಆಚರಿಸಲಾಗುವ ಶಿವಾಜಿ ಜಯಂತಿಯಲ್ಲಿ ಎಲ್ಲಾ ಧರ್ಮಗುರುಗಳಿಗೆ ಆಹ್ವಾನಿಸಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ವ್ಯಕ್ತಿಗಳನ್ನೂ ವೇದಿಕೆಗೆ ಕರೆ ತರಲಾಗುವುದು’ ಎಂದು ಹೇಳಿದರು.
ಮರಾಠಾ ಸಮಾಜದ ಹಿರಿಯ ಮುಖಂಡ ನಾಮದೇವರಾವ್ ಪವಾರ್ ಮಾತನಾಡಿದರು.
ಮುಖಂಡ ಕಿಶನರಾವ್ ಪಾಟೀಲ ಇಂಚೂರಕರ್ ಮಾತನಾಡಿ, ‘ಇದೂವರೆಗೆ ಮೂರು ಸಭೆಗಳನ್ನು ನಡೆಸಲಾಗಿದ್ದು, ಮರಾಠಾ ಸಮಾಜದ ಎಲ್ಲಾ ಮುಖಂಡರನ್ನು ಗಣನೆಗೆ ತೆಗೆದುಕೊಂಡು ಜಯಂತಿ ಆಚರಿಸುವ ನಿಟ್ಟಿನಲ್ಲಿ ಡಾ.ಗುಂಡೇರಾವ್ ಶೇಡೋಳೆ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ’ ಎಂದು ಹೇಳಿದರು.
ಮುಖಂಡರಾದ ದಿಗಂಬರಾವ್ ಮಾನಕಾರಿ, ವಕೀಲ ರಾಹುಲ್ ಸಾವಳೆ, ರಾಜಕುಮಾರ ಭೋಸಲೆ, ಡಾ. ಉದ್ಧವ ಕನಸೆ, ಪಾಂಡುರಂಗ ಕನಸೆ, ಡಿ.ಜಿ.ಜಗತಾಪ ಮಾತನಾಡಿದರು.
ದಯಾನಂದರಾವ್ ಸೂರ್ಯವಂಶಿ, ಯಶವಂತ ಭೋಸಲೆ, ಪಂಚಾಕ್ಷರಿ ಪಾಟೀಲ, ಶಾಹುರಾಜ್ ಪವಾರ್, ಪ್ರತಾಪ ಪಾಟೀಲ, ದಿಗಂಬರರಾವ್ ಜಗತಾಪ, ವೆಂಕಟ ತಗರಖೇಡೆ, ದತ್ತಾ ಸಾವರೆ, ಕೃಷ್ಣಾ ಪಾಟೀಲ, ಆರ್.ಕೆ.ವಿಜಯಕುಮಾರ, ವೆಂಕಟ ಬಿರಾದಾರ, ವೆಂಕಟೇಶ ಶಿಂಧೆ, ಜ್ಞಾನೇಶ್ವರ ಬಿರಾದಾರ, ಅಮರ ಶೇಡೋಳೆ, ಆಶೀಸ್ ತಗರಖೇಡೆ, ಹಣಮಂತರಾವ್ ಪವಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.