ADVERTISEMENT

ಬಸವಕಲ್ಯಾಣ | ಆದೇಶ ನೀಡದೆ ದಾರಿ ತೋರುವನು ಗುರು: ಮುರುಘರಾಜೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:05 IST
Last Updated 6 ಫೆಬ್ರುವರಿ 2026, 5:05 IST
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಗುರುವಾರ ನಡೆದ ಅಭಿನವ ಚನ್ನಬಸವ ಸ್ವಾಮೀಜಿ ಅವರ ಪಟ್ಟಾಧಿಕಾರದ ವಾರ್ಷಿಕೋತ್ಸವದಲ್ಲಿ ಮುಗುಳಖೋಡ ಮುರುಘರಾಜೇಂದ್ರ ಸ್ವಾಮೀಜಿ ಧ್ವನಿಸುರುಳಿ ಬಿಡುಗಡೆಗೊಳಿಸಿದರು
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಗುರುವಾರ ನಡೆದ ಅಭಿನವ ಚನ್ನಬಸವ ಸ್ವಾಮೀಜಿ ಅವರ ಪಟ್ಟಾಧಿಕಾರದ ವಾರ್ಷಿಕೋತ್ಸವದಲ್ಲಿ ಮುಗುಳಖೋಡ ಮುರುಘರಾಜೇಂದ್ರ ಸ್ವಾಮೀಜಿ ಧ್ವನಿಸುರುಳಿ ಬಿಡುಗಡೆಗೊಳಿಸಿದರು   

ಬಸವಕಲ್ಯಾಣ: ‘ಗುರು ಆದೇಶ ನೀಡದೆ ದಾರಿ ತೋರುತ್ತಾನೆ. ದೇವರಕ್ಕಿಂತಲೂ ಕಡಿಮೆಯಲ್ಲ’ ಎಂದು ಮುಗುಳಖೋಡ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ತಾಲ್ಲೂಕಿನ ಮಂಠಾಳದ ಗುರುಲಿಂಗೇಶ್ವರ ಚೌಕಿಮಠದಲ್ಲಿ ಗುರುವಾರ ಆಯೋಜಿಸಿದ್ದ ಅಭಿನವ ಚನ್ನಬಸವ ಸ್ವಾಮೀಜಿ ಅವರ ಪಟ್ಟಾಧಿಕಾರದ ವಾರ್ಷಿಕೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿದರು.

‘ಮಾನವೀಯ ಮೌಲ್ಯ ಹೊಂದಿರುವುದೇ ಶರಣ ಸಂಸ್ಕೃತಿ. ಇದರ ಪ್ರಕಾರ ಗುರು ಶಿಷ್ಯರ ಸಂಬಂಧ ಮೇಲು ಕೀಳು ಅಲ್ಲ. ತಾಯಿ ಮತ್ತು ಮಗುವಿನ ಮಧ್ಯದ ಮಮತೆಯ ಭಾವನೆ ಹೊಂದಿರುತ್ತದೆ’ ಎಂದರು. 

ADVERTISEMENT

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಧರ್ಮ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ’ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಸಾಹಿತಿ ಸೋಮನಾಥ ಯಾಳವಾರ ಮಾತನಾಡಿದರು.

ಅಭಿನವ ಚನ್ನಬಸವ ಸ್ವಾಮೀಜಿ, ಭರತನೂರು ಚಿಕ್ಕ ಗುರುನಂಜೇಶ್ವರ ಸ್ವಾಮೀಜಿ, ಮುಖಂಡ ಶಿವಕುಮಾರ ಶೆಟಗಾರ್, ಕಾಶಪ್ಪ ಚಕ್ಕೆರೆ, ಗಜಾನಂದ ಕುಕ್ಕಾಪಾಟೀಲ ಮಾತನಾಡಿದರು. ಮಠದ ಕುರಿತು ರಚಿಸಿದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.

ಇದಕ್ಕೂ ಮೊದಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುಲಸೂರ ಶಿವಾನಂದ ಸ್ವಾಮೀಜಿ ಅವರಿಗೆ ‘ಗುರುಲಿಂಗ ಧರ್ಮ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾಲ್ಕಿ ಗುರುಬಸವ ಪಟ್ಟದ್ದೇವರು. ಸಾಯಗಾಂವ ಶಿವಾನಂದ ದೇವರು, ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಗಣ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.