
ಪ್ರಜಾವಾಣಿ ವಿಶೇಷಸಾಂಪ್ರದಾಯಿಕ ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತವಾಗಿದ್ದ ಬೀದರ್ ಜಿಲ್ಲೆಯಲ್ಲೀಗ ಸ್ಟ್ರಾಬೆರಿ ಸದ್ದು ಮಾಡುತ್ತಿದೆ. ಪ್ರಗತಿಪರ ರೈತ ವೈಜಿನಾಥ ನಿಡೋದಾ ಅವರು ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದ ತಮ್ಮ ಎರಡು ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆದು ಲಾಭದ ಹಳಿಯಲ್ಲಿ ಮುನ್ನಡೆದಿದ್ದಾರೆ. ಸ್ಟ್ರಾಬೆರಿಯನ್ನು ದೇಶದಲ್ಲೇ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಅಲ್ಲಿ ವರ್ಷವಿಡೀ ತಂಪು ವಾತಾವರಣ ಇರುವುದೇ ಮುಖ್ಯ ಕಾರಣ. ಈಗ ಬೀದರ್‌ನಲ್ಲೂ ಈ ಬೆಳೆ ಯಶಸ್ಸು ಕಂಡಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.