ADVERTISEMENT

ಕ್ಷಮಿಸಿ ಮಮ್ಮಿ,‌ ಡ್ಯಾಡಿ... ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:39 IST
Last Updated 11 ಫೆಬ್ರುವರಿ 2026, 6:39 IST
<div class="paragraphs"><p>ಶರತ್ ಪರಮೇಶ್ವರ</p></div>

ಶರತ್ ಪರಮೇಶ್ವರ

   

ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ನಾರಾಯಣಪುರದ ಜವಾಹರ ನವೋದಯ ವಿದ್ಯಾಲಯದಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ಶರತ್ ಪರಮೇಶ್ವರ (16) ನೇಣು ಬಿಗಿದುಕೊಂಡು ಬುಧವಾರ ನಸುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಮಂಠಾಳ ಗ್ರಾಮದವನಾಗಿದ್ದು 10ನೇ ತರಗತಿಯಲ್ಲಿದ್ದಾನೆ. ಕ್ಷಮಿಸಿ ಮಮ್ಮಿ, ಡ್ಯಾಡಿ, ಐ ಲವ್ ಯು ಎಂದು ಕಾಗದದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ನಗರ ಠಾಣೆ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ ಮತ್ತಿತರರು ಸ್ಥಳಕ್ಕೆ ಭೇಟಿ‌ ನೀಡಿದ್ದು, ತನಿಖೆ ನಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.