ADVERTISEMENT

ವಚನ ಸಾಹಿತ್ಯ, ದಾಸ ಸಾಹಿತ್ಯ ಶ್ರೇಷ್ಠ: ಬಂಡೆಪ್ಪ ಕಾಶೆಂಪುರ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 16:08 IST
Last Updated 24 ಡಿಸೆಂಬರ್ 2023, 16:08 IST
ಬೀದರ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭವನ್ನು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್‌ ಉದ್ಘಾಟಿಸಿದರು
ಬೀದರ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭವನ್ನು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್‌ ಉದ್ಘಾಟಿಸಿದರು   

ಬೀದರ್‌: ಕನಕ ಕನ್ನಡ ಸಾಂಸ್ಕೃತಿಕ ಸಂಘದಿಂದ ನಗರದಲ್ಲಿ ಭಾನುವಾರ, ಪ್ರಥಮ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬಿ.ಎಂ.ಅಮರವಾಡಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್‌,‘ಸಾಮಾಜಿಕ ಜಾಲತಾಣಗಳ ಪ್ರಭಾವದಲ್ಲಿ ಸಾಹಿತ್ಯ ನಶಿಸಿ ಹೋಗಬಾರದು. ವಚನ ಸಾಹಿತ್ಯ, ದಾಸ ಸಾಹಿತ್ಯ ಶ್ರೇಷ್ಠವಾದುದು. ಅದನ್ನು ಉಳಿಸಿ, ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

ಶರಣರು, ದಾಸರು ಅರ್ಥಪೂರ್ಣವಾದ ಸಾಹಿತ್ಯವನ್ನು ರಚಿಸಿದ್ದಾರೆ. ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್‌ ಸೇರಿ ಹಲವು ಮಹನೀಯರು ಮಾನವ ಕುಲದ ಒಳಿತಿಗೆ ಶ್ರಮಿಸಿದ್ದಾರೆ. ನಮ್ಮ ಭಾಗದ ಬಿ.ಎಂ.ಅಮರವಾಡಿಯವರು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಂತಸದ ವಿಷಯ ಎಂದರು.

ADVERTISEMENT

ದಾಸ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಮಾಡಬೇಕಾಗಿದೆ. ಅನೇಕ ಸಮಾಜದವರು ಉತ್ತಮವಾದ ಸಮ್ಮೇಳನಗಳನ್ನು ಮಾಡಿದ್ದಾರೆ. ನಾವು ಕೂಡ ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕುರುಬ ಸಮಾಜದ ಪಂಡಿತರಾವ್ ಚಿದ್ರಿ ಹೇಳಿದರು.

ಮುಖಂಡರಾದ ಸಂತೋಷ ಜೋಳದಾಪಕೆ, ಗೀತಾ ಪಂಡಿತರಾವ್ ಚಿದ್ರಿ, ಬಿ.ಎಂ.ಅಮರವಾಡಿ, ಬಾಬುರಾವ್ ಮಲ್ಕಾಪೂರೆ, ಮಲ್ಲಿಕಾರ್ಜುನ ಬಿರಾದಾರ, ಲಕ್ಷ್ಮಣ್ ಮೇತ್ರೆ, ಮಾಳಪ್ಪ ಅಡಸಾರೆ, ಎಂ.ಎಸ್.ಕಟಗಿ, ಬೊಮ್ಮಗೊಂಡ ಚಿಟ್ಟಾವಾಡಿ, ಸಂತೋಷ ಬಗದಲ್, ಲೋಕೇಶ ಮರ್ಜಾಪೂರೆ, ಟಿ.ಎಂ.ಮಚ್ಚೆ, ಬಕ್ಕಪ್ಪ ನಾಗೋರೆ, ಸುಭಾಷ್ ನಾಗೋರೆ, ವಿಜಯಕುಮಾರ್ ಬ್ಯಾಲಹಳ್ಳಿ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.