ADVERTISEMENT

ಸಮಾಜದಲ್ಲಿ ಸಮಾನತೆಗೆ ವಚನಗಳು ಪೂರಕವಾಗಿವೆ; ಪ್ರಭುಲಿಂಗ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:07 IST
Last Updated 3 ಡಿಸೆಂಬರ್ 2025, 7:07 IST
ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಈಚೆಗೆ 220ನೇ ಶರಣ ಸಂಗಮ ಪ್ರಯುಕ್ತ ನಡೆದ ವಚನ ಪ್ರವಚನ ಕಾರ್ಯಕ್ರಮದಲ್ಲಿ ರಾಜಗೀರಾ ಮಠದ ಪ್ರಭುಲಿಂಗ ಸ್ವಾಮಿ ಹಾಜರಿದ್ದರು
ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಈಚೆಗೆ 220ನೇ ಶರಣ ಸಂಗಮ ಪ್ರಯುಕ್ತ ನಡೆದ ವಚನ ಪ್ರವಚನ ಕಾರ್ಯಕ್ರಮದಲ್ಲಿ ರಾಜಗೀರಾ ಮಠದ ಪ್ರಭುಲಿಂಗ ಸ್ವಾಮಿ ಹಾಜರಿದ್ದರು   

ಕಮಲನಗರ: ಸಮಾಜದಲ್ಲಿ ಸಮಾನತೆಗೆ ವಚನಗಳು ಪೂರಕವಾಗಿವೆ ಎಂದು ರಾಜಗೀರಾ ಮಠದ ಪ್ರಭುಲಿಂಗ ಸ್ವಾಮಿ ಹೇಳಿದರು.

ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಈಚೆಗೆ 220ನೇ ಶರಣ ಸಂಗಮ ಪ್ರಯುಕ್ತ ನಡೆದ ವಚನ ಪ್ರವಚನ ಮತ್ತು ಬಸವನೀಲಗಂಗಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆದರ್ಶ ಸಂಸ್ಕೃತಿಯ ಸರಳ ನಿರೂಪಣೆ. ಸ್ವಚ್ಛಂದ ಮಾನವೀಯ ಮೌಲ್ಯ ಬಿತ್ತಿ ಬೆಳಕು ಚೆಲ್ಲಿದ ವಚನಕಾರರು ಮಾನವನಿಗೆ ದಟ್ಟ ಅನುಭವ ನೀಡಿದ್ದಾರೆ. ಗಂಭೀರ ಸಂವಾದವೂ ಸೇರಿ ವಿಶಾಲ ತಾತ್ವಿಕ ಚಿಂತನೆ ನೀಡಿದ ಅವರ ಹಾದಿ ಮನುಕುಲಕ್ಕೆ ಸದಾ ಪ್ರೇರಣಾದಾಯಕ. ಕಾಯಕ ಸಂಸ್ಕೃತಿಯ ಪ್ರತಿನಿಧಿಗಳಾಗಿ ಇಡೀ ನಾಡಿನ ತುಂಬ ಪ್ರಗತಿಪರ ಹೆಜ್ಜೆ ಗುರುತು ಮೂಡಿಸಿದ ಶರಣರ ನಡೆ-ನುಡಿಗಳು ಈ ದೇಶದ ಸಾಂಸ್ಕೃತಿಕ, ಸಾಹಿತ್ಯಕ ಇತಿಹಾಸಕ್ಕೆ ದೊಡ್ಡ ಕೊಡುಗೆ ಎಂದರು.

ADVERTISEMENT

ಔರಾದ್ ಏಕತಾ ಫೌಂಡೇಷನ್ ಟ್ರಸ್ಟ್‌ನ ಅಧ್ಯಕ್ಷ ರವೀಂದ್ರ ಸ್ವಾಮಿ, ಮಾದವರಾವ ಪಾಟೀಲ, ಮುಖ್ಯಶಿಕ್ಷಕ ಸೂರ್ಯಕಾಂತ ಸಿಂಗೆ, ಪ್ರಕಾಶ ದೇಶಮುಖ, ಸುರೇಖಾ ಮಲ್ಲಾಪುರ, ಸಂಜೀವಕುಮಾರ ಜುಮ್ಮಾ, ನಾಗಯ್ಯ ಸ್ವಾಮಿ, ಮುನ್ನಕ್ಕಾ, ಮಲ್ಲಮ್ಮಾ, ನೀಲಮ್ಮಾ ಬೆಂಬುಳಗೆ, ರಾಜಶೇಖರ ಅಜ್ಜ, ಗುರುನಾಥ ವಟಗೆ, ಹಾವಗಿರಾವ ವಟಗೆ ಹಾಗೂ ಶರಣ-ಶರಣೆಯರು ಇದ್ದರು.

ಶಿವಲೀಲಾ ಕುಂಬಾರ ವಚನ ನೃತ್ಯ ಪ್ರಸ್ತುತ ಪಡಿಸಿದರು. ಹಾವಗೀರಾವ ಶೆಂಬೆಳ್ಳಿ ವಚನಗಾಯನ ನಡೆಸಿಕೊಟ್ಟರು. ನಾಗನಾಥ ಸ್ವಾಮಿ ಸ್ವಾಗತಿಸಿದರು. ನಾಗನಾಥ ಶಂಕರ ನಿರೂಪಿಸಿದರು. ಬಸವರಾಜ ಒಂಟೆ ವಂದಿಸಿದರು.

ಇದೇ ಸಂದರ್ಭದಲ್ಲಿ ಬಸವನೀಲಗಂಗಾ ಪ್ರಶಸ್ತಿ ಪುರಸ್ಕೃತ ನಾಗಯ್ಯ ಸ್ವಾಮಿ ದಂಪತಿಯನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.