
ಔರಾದ್: ತಾಲ್ಲೂಕಿನ ವಡಗಾಂವ್ (ದೇ) ಗ್ರಾಮದಲ್ಲಿ ಭಾನುವಾರ ಹಿಂದೂ ಸಮ್ಮೇಳನ ಹಾಗೂ ಶೋಭಾಯಾತ್ರೆ ನಡೆಯಿತು.
ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆ ಪ್ರಮುಖ ಬೀದಿಗಳ ಮೂಲಕ ಅದ್ದೂರಿಯಾಗಿ ನಡೆಯಿತು. ತಾಯಿ ಭಾರತಾಂಬೆ ಭಾವಚಿತ್ರ, ಕಳಸ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಮಹಾತ್ಮರ ವೇಷಧಾರಿಗಳು ಶೋಭಾಯಾತ್ರೆಯ ಕಳೆ ಹೆಚ್ಚಿಸಿದರು. ಗಡಿ ಗ್ರಾಮಗಳ ಹತ್ತಾರು ಗ್ರಾಮಗಳ ಹಿಂದೂ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟು, ಧ್ವಜ ಹಿಡಿದು ಸಂಭ್ರಮಿಸಿದರು.
ಶೋಭಾಯಾತ್ರೆ ನಂತರ ಶರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ನಾಗರಾಜ ಸೇಡಂ ಮಾತನಾಡಿ, ‘ಸಾಮಾಜಿಕ ಸಾಮರಸ್ಯ, ನಾಗರಿಕ ಕರ್ತವ್ಯ, ಸ್ವದೇಶಿ ಭಾವ ಹಾಗೂ ಪರಿಸರ ಸಂರಕ್ಷಣೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮವಾಗಿದ್ದು, ಸಂಸ್ಕೃತಿ–ಪರಂಪರೆಯಿಂದ ಬೆಳೆದು ಹೆಮ್ಮರವಾಗಿ ನಿಂತಿದೆ. ಇಂದು ಜಗತ್ತು ಭಾರತದ ಕಡೆ ತಿರುಗಿ ನೋಡುವಂತಾಗಿರುವುದು ಹಿಂದೂ ಧರ್ಮವೇ ಪ್ರಮುಖ ಕಾರಣವಾಗಿದೆ’ ಎಂದು ಹೇಳಿದರು
ಹಣೆಗಾಂವ್ ಶಂಕರಲಿಂಗ ಶಿವಾಚಾರ್ಯರು, ಹೆಡಗಾಪೂರ ದಾರುಕಲಿಂಗ ಶಿವಾಚಾರ್ಯರು ಮಾತನಾಡಿ, ‘ಯುವಕರು ದೇಶಭಕ್ತಿ ಹಾಗೂ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.
ಶಾಸಕ ಪ್ರಭು ಚವಾಣ್, ನಿರಂಜನ ಸ್ವಾಮೀಜಿ, ರಾಮಚೈತನ್ಯ ಮಹಾರಾಜರು, ರಾಜಗುರು ಮಹಾರಾಜರು, ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದೇಶಮುಖ, ಶಿವಶರಣ ಚಾಂಬೊಳ, ಬಾಲಾಜಿ ಪಾಟೀಲ, ಅಶೋಕ ಶೆಂಬೆಳ್ಳಿ, ಅಮರಸ್ವಾಮಿ, ಅಂಬಾದಾಸ ನೇಳಗೆ, ಆನಂದ ದ್ಯಾಡೆ, ಮಲ್ಲಪ್ಪ ನೇಳಗೆ, ಪ್ರಕಾಶ ಜೀರ್ಗೆ, ಕಿಶನರಾವ ಪಾಟೀಲ, ಕಿರಣ ಪಾಟೀಲ, ಶುಭಾಷ ಪಾಟೀಲ, ರವೀಂದ್ರ ರೆಡ್ಡಿ, ಪ್ರಕಾಶ, ಸಂಗಮೇಶ ಕೌಟಗೆ, ಅಮರ ಸೌಲೆ, ರಮೇಶ ಮೊರ್ಗಿ, ಸಿದ್ದಯ್ಯ ಸ್ವಾಮಿ, ಖಂಡೋಬಾ ಕಂಗಟೆ, ಸಂಗಮೇಶ ವಿಶ್ವಕರ್ಮ, ಶಿವಕುಮಾರ ಸೊರಳ್ಳಿ, ಜಗದೀಶ್, ಬಾಲಾಜಿ, ಸೂರ್ಯಕಾಂತ ಪಾಟೀಲ, ವೀರೇಶ ಸಗರ, ಪ್ರಕಾಶ ಮೇತ್ರೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.