
ಪ್ರಜಾವಾಣಿ ವಾರ್ತೆ
ಬಸವಕಲ್ಯಾಣ: ನಗರದ ವೀರಗೊಲ್ಲಾಳೇಶ್ವರ ಗವಿ ಆವರಣವನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಸ್ವಚ್ಛಗೊಳಿಸಲಾಗಿದೆ.
ಮಾರ್ಚ್ 12ರ ಪ್ರಜಾವಾಣಿಯ ‘ಶರಣರ ಸ್ಮಾರಕಗಳ ದುಸ್ಥಿತಿ -5’ ಸರಣಿ ಅಂಕಣದಲ್ಲಿ ‘ವೀರಗೊಲ್ಲಾಳೇಶ್ವರ ಗವಿ ಮೇಲ್ಗಡೆ ಕಸ ಸಂಗ್ರಹ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.
ಎಚ್ಚೆತ್ತುಕೊಂಡ ಸಂಬಂಧಿತರು ಗವಿಯ ಮೇಲೆ ಮತ್ತು ಆವರಣದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ. ‘ಈ ವರದಿಯನ್ನು ಮಂಡಳಿಯ ಅಧ್ಯಕ್ಷರು ಸಹ ಆಗಿರುವ ಮುಖ್ಯಮಂತ್ರಿ ಅವರಿಗೆ ಕಳುಹಿಸಲಾಗಿತ್ತು. ವರದಿಗೆ ತಕ್ಷಣ ಸ್ಪಂದಿಸಿರುವುದು ಉತ್ತಮ ಕಾರ್ಯವಾಗಿದೆ' ಎಂದು ಸಾಮಾಜಿಕ ಕಾರ್ಯಕರ್ತ ಗೋವಿಂದ ಶಿಂಧೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.