ಗುಂಡ್ಲುಪೇಟೆ: ನಾವು ಈಗ ಮುಂಬೈ ಟೀಂ ಅಲ್ಲ. ಆ ಟೀಂಗೆ ಬಿಜೆಪಿ ತಾಳಿ ಕಟ್ಟಿದೆ. ನಾವೆಲ್ಲ ಯಡಿಯೂರಪ್ಪ ಟೀಂ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಖಾತೆ ಹಂಚಿಕೆ ಬಗ್ಗೆ ಉಂಟಾಗಿರುವ ಅಸಮಾಧಾನದ ಬಗ್ಗೆ ಕೇಳಿದ್ದಕ್ಕೆ, 'ಕೈಯಲ್ಲಿ ಐದು ಬೆರಳು ಒಂದೇ ಸಮನಾಗಿ ಇಲ್ಲ. ಅದೇ ರೀತಿ ಖಾತೆ ಹಂಚಿಕೆಯಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಆಗಿವೆ. ಕೆಲವು ಸಚಿವರಿಗೆ ಹಂಚಿಕೆಯಾದ ಖಾತೆಯಲ್ಲಿ ಅಸಮಾಧಾನ ಇದೆ. ಹೀಗಾಗಿ ಖಾತೆ ಹಂಚಿಕೆಯಾದ 24 ಗಂಟೆಯಲ್ಲಿ ಖಾತೆ ಮರು ಹಂಚಿಕೆ ಮಾಡಲಾಗಿದೆ' ಎಂದರು .
'ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಅವರು ಎಲ್ಲ ಸಮಸ್ಯೆ ಬಗೆಹರಿಸುತ್ತಾರೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.