ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಇಲ್ಲಿ ಇಂದು (ಗುರುವಾರ) ಮಧ್ಯಾಹ್ನ ಆಯೋಜನೆಗೊಂಡಿರುವ ಸಚಿವ ಸಂಪುಟ ಸಭೆಯಲ್ಲಿ, ವರನಟ ಡಾ.ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ.
ಸಚಿವ ಸಂಪುಟ ಸಭೆಯ ಸಭಾಂಗಣದ ಪಕ್ಕದಲ್ಲಿ ಸಿದ್ಧಪಡಿಸಿರುವ ಮಾಧ್ಯಮ ಗೋಷ್ಠಿ ಸ್ಥಳದಲ್ಲಿ ರಾಜ್‌ಕುಮಾರ್ ಅವರ ಫೋಟೊ ಇಟ್ಟು ಪುಷ್ಪಾಲಂಕಾರ ಮಾಡಲಾಗಿದೆ. ಈ ಮೂಲಕ ಜನ್ಮದಿನದ ಅಂಗವಾಗಿ ವರನಟನನ್ನು ಗೌರವಿಸುವ ಕಾರ್ಯ ನಡೆದಿದೆ.
ರಾಜ್‌ಕುಮಾರ್ ಅವರು ಚಾಮರಾಜನಗರ ಜಿಲ್ಲೆಯವರೇ ಆಗಿರುವುದರಿಂದ ವಿಶೇಷ ನಮನವನ್ನು ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.