ಪಾಲಾರ್ ಅರಣ್ಯ ಪ್ರದೇಶದ ದೊಡ್ಡಹಳ್ಳ ಗಸ್ತು ಬಳಿ ಹೆಣ್ಣಾನೆ ಕಳೇಬರ ಪತ್ತೆಯಾಗಿದೆ
ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಾಲಾರ್ ಅರಣ್ಯ ಪ್ರದೇಶದ ದೊಡ್ಡಹಳ್ಳ ಗಸ್ತು ಬಳಿ 35 ವರ್ಷದ ಹೆಣ್ಣಾನೆಯೊಂದು ಮೃತಪಟ್ಟಿದೆ.
ಆನೆಯು ಹಲವು ದಿನಗಳ ಹಿಂದೆಯೇ ಸ್ವಾಭಾವಿಕವಾಗಿ ಮೃತಪಟ್ಟಿದ್ದು ಸಿಬ್ಬಂದಿ ಗಸ್ತು ಮಾಡುವಾಗ ಕಳೇಬರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.