ಚಾಮರಾಜನಗರ: ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯವಾದ ಚಾಮರಾಜನಗರ ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಮಲ್ಲಿಕಾರ್ಜುನ ಹಾಗೂ ಮಹಿಳೆಯರ ವಿಭಾಗದಲ್ಲಿ ಅರುಣಾಶ್ರೀ ಹೊಸಮನಿ ಸಮಗ್ರ ಪ್ರಶಸ್ತಿ ಪಡೆದುಕೊಂಡರು. ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಫಲಿತಾಂಶ: ಬ್ಯಾಡ್ಮಿಂಟನ್ ಡಬಲ್ಸ್ ಪುರುಷರ ವಿಭಾಗದಲ್ಲಿ ಶಶಿಧರ್ ಹಾಗೂ ಚಂದ್ರಕುಮಾರ್ ಜೋಡಿ ಪ್ರಥಮ, ಅರುಣ್ ಹಾಗೂ ಬರ್ಕತ್ ಅಲಿ ಜೋಡಿ ದ್ವಿತೀಯ, ರವಿಕಿರಣ್ ಹಾಗೂ ಈಶ್ವರ್ ಜೋಡಿ ತೃತೀಯ ಸ್ಥಾನ ಪಡೆಯಿತು. 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಅನಂತ್ ರಾಮ್ ಹಾಗೂ ಸುಂದರ್ ಪ್ರಥಮ, ಶ್ರೀನಿ ಹಾಗೂ ಮಹೇಶ್ ಜೋಡಿ ದ್ವಿತೀಯ ಸ್ಥಾನ ಪಡೆಯಿತು. 53 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಟಿ.ಹೀರಾಲಾಲ್ ಹಾಗೂ ಭಾಸ್ಕರ್ ಜೋಡಿ ಪ್ರಥಮ, ಶ್ರೀಪತಿ–ಅನಂತ್‌ರಾಮ್ ಜೋಡಿ ದ್ವಿತೀಯ ಬಹುಮಾನ ಪಡೆಯಿತು.
ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸುಮಾ ಪ್ರಥಮ, ಮಹಾಲಕ್ಷ್ಮಿ ದ್ವಿತೀಯ, ಭಾನುಮತಿ ತೃತೀಯ, ಡಬಲ್ಸ್‌ನಲ್ಲಿ ಸುಮಾ–ಜ್ಯೋತಿ ಪ್ರಥಮ, ಮಹಾಲಕ್ಷ್ಮಿ–ಕೇತಮ್ಮ ದ್ವಿತೀಯ ಪ್ರಶಸ್ತಿ ಪಡೆಯಿತು.
5000 ಮೀಟರ್ ಓಟ ಸ್ಪರ್ಧೆಯಲ್ಲಿ ಪುನೀತ್ ಪ್ರಥಮ, ಸಣ್ಣಪ್ಪ ದ್ವಿತೀಯ, ಪ್ರವೀಣ್ ತೃತೀಯ ಸ್ಥಾನ ಪಡೆದರು, 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಲ್ಲಿಕಾರ್ಜುನ್ ಪ್ರಥಮ, ರಂಗಸ್ವಾಮಿ ದ್ವಿತೀಯ, ಟೇಬಲ್ ಟೆನ್ನಿಸ್‌ನಲ್ಲಿ ನಿರಂಜನ್ ಪ್ರಥಮ, ಸ್ವಪ್ನಿಲ್ ದ್ವಿತೀಯ, ಕಾಂತರಾಜು ತೃತೀಯ, 4x400 ಮೀ ರಿಲೇಯಲ್ಲಿ ಮಹೇಶ್, ಜಡೆಸ್ವಾಮಿ, ರಮೇಶ್ ಹಾಗೂ ಮಹೇಶ್ ತಂಡ ಪ್ರಥಮ ಸ್ಥಾನ ಪಡೆದರೆ ಸಣ್ಣಪ್ಪ, ಪ್ರವೀಣ, ಮಲ್ಲಿಕಾರ್ಜುನ, ಭೀಮಪ್ಪ ತಂಡ ದ್ವಿತೀಯ ಸ್ಥಾನ ಪಡೆಯಿತು.
4x100 ರಿಲೇಯಲ್ಲಿ ಕಾವೇರಿ ವನ್ಯಜೀವಿ ವಿಭಾಗದ ಶೇಖರ್, ಭೀಮಪ್ಪ, ಸಣ್ಣಪ್ಪ, ಮಲ್ಲಿಕಾರ್ಜುನ್ ತಂಡ ಪ್ರಥಮ, ಬಿಆರ್‌ಟಿ ವಲಯದ ಸಂದೇಶ್, ಪ್ರಕಾಶ್, ಶಿವಕುಮಾರ್, ಆಕಾಶ್ ತಂಡ ದ್ವಿತೀಯ, 100 ಮೀ ಓಟ ಸ್ಪರ್ಧೆಯಲ್ಲಿ ಮಹೇಶ್ ಪ್ರಥಮ, ಸಂದೇಶ್ ದ್ವಿತೀಯ, ಶೇಖರ್ ತೃತೀಯ ಬಹುಮಾನ ಪಡೆದರು.
ಎತ್ತರ ಜಿಗಿತ ಸ್ಪರ್ಧೆಯಲ್ಲಿ ಅರುಣಾಶ್ರೀ ಹೊಸಮನಿ ಪ್ರಥಮ, ಬಸಮ್ಮ ದ್ವಿತೀಯ, ಕೇತಮ್ಮ ತೃತೀಯ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗ ಪ್ರಥಮ, ಕಾವೇರಿ ವನ್ಯಜೀವಿ ವಿಭಾಗ ದ್ವಿತೀಯ ಸ್ಥಾನ ಪಡೆಯಿತು. ವಾಲಿಬಾಲ್‌ನಲ್ಲಿ ಕಾವೇರಿ ವನ್ಯಜೀವಿ ವಿಭಾಗ, ಎಂಎಂ ಹಿಲ್ಸ್, ಬಿಆರ್‌ಟಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವು. ಕಬಡ್ಡಿ ಪಂದ್ಯಾಟದಲ್ಲಿ ಎಂಎಂ ಹಿಲ್ಸ್ ಪ್ರಥಮಸ್ಥಾನ ಪಡೆದರೆ ಕಾವೇರಿ ದ್ವಿತೀಯ, ಬಿಆರ್‌ಟಿ ತೃತೀಯ ಸ್ಥಾನ ಪಡೆಯಿತು.
ಅರಣ್ಯ ಜೀವಿ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ವಿಜೇತರಿಗೆ ಬಹುಮಾನ ವಿತರಿಸಿದರು. ಸಿಸಿಎಫ್ ಟಿ.ಹೀರಾಲಾಲ್ ಅಧ್ಯಕ್ಷತೆ ವಹಿಸಿದ್ದರು. ಬಿಆರ್‌ಟಿ ನಿರ್ದೇಶಕ ಬಿ.ಎಸ್.ಶ್ರೀಪತಿ, ಎಂಎಂ ಹಿಲ್ಸ್ ಡಿಸಿಎಫ್ ಬಿ.ಭಾಸ್ಕರ್, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಸುರೇಂದ್ರ, ಯಳಂದೂರು ಡಿಸಿಎಫ್ ಪ್ರಕಾಶ್ಕರ್ ಅಕ್ಷಯ್ ಅಶೋಕ್, ಎಸಿಎಫ್ ಸ್ವಪ್ನಿಲ್ ಮನಸೋರೆ, ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.