ಹನೂರು: ತಾಲ್ಲೂಕಿನ ಕೆ.ಗುಂಡಾಪುರದ ಪರಮೇಶ ಎಂಬುವರಿಗೆ ಸೇರಿದ ಮೇಕೆಯನ್ನು ಚಿರತೆ ಕೊಂದಿದೆ.
ಮೇಕೆ ಮೇಯಿಸಿ ಸಂಜೆ ವೇಳೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಬುಧವಾರ ತಡರಾತ್ರಿ ಚಿರತೆ ದಾಳಿ ನಡೆಸಿದೆ. ಸಮೀಪದಲ್ಲೇ ಇದ್ದ ಸಾಕು ನಾಯಿಯನ್ನು ಹೊತ್ತೊಯ್ದಿದೆ. ಈ ಭಾಗದಲ್ಲಿ ಚಿರತೆಯ ಉಪಟಳ ಹೆಚ್ಚಾಗಿದ್ದು, ಕುರಿ, ಮೇಕೆಗಳನ್ನು ತಿಂದು ಹಾಕುತ್ತಿದೆ. ರೈತಾಪಿ ವರ್ಗ ಆತಂಕಗೊಂಡಿದ್ದು, ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.