
ಚಾಮರಾಜನಗರ: ನಟ ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’ ಹಾಡಿನ ಬಿಡುಗಡೆ ಹಾಗೂ ಭ್ರಮರಾಂಭ ಚಿತ್ರಮಂದಿರದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.
ಸಮಾರಂಭದಲ್ಲಿ ಭಾಗವಹಿಸಲು ಭ್ರಮರಾಂಭ ಚಿತ್ರಮಂದಿರಕ್ಕೆ ನಟ ಧನ್ವೀರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದರು.
ನಟ ಧನ್ವೀರ್ ಗೌಡ ಮಾತನಾಡಿ ಹಯಗ್ರೀವ ಸಿನಿಮಾ ಸುಮಧುರವಾದ ಹಾಡು, ಸಂಭಾಷಣೆ, ಸಾಹಸ, ಹಾಗೂ ಹಾಸ್ಯಭರಿತ ಸನ್ನಿವೇಶಗಳನ್ನು ಒಳಗೊಂಡಿದೆ. ಫೆ.27ರಂದು ಸಿನಿಮಾ ಬಿಡುಗಡೆಯಾಗಲಿದ್ದು ಚಾಮರಾಜನಗರ ಜಿಲ್ಲೆಯ ಜನತೆ ಪೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಚಿತ್ರಮಂದಿರದ ಮಾಲೀಕ ರೇವಂತ್ ದೇವರು ಮಾತನಾಡಿ, ‘ಹಯಗ್ರೀವ’ ಚಿತ್ರದ ಹಾಡು ಭ್ರಮರಾಂಭ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿರುವುದು ಖುಷಿ ತಂದಿವೆ. ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದರು.
ತಾತ ಮಾಂಬಳ್ಳಿ ಸಾಹುಕಾರ್ ಎಂ.ಎಸ್.ರೇವಣ್ಣ ದೇವರು 1950ರಲ್ಲಿ ಸ್ಥಾಪಿಸಿದ ಭ್ರಮರಾಂಭ ಚಿತ್ರಮಂದಿರ 75ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಸಾವಿರಾರು ಚಿತ್ರಗಳು ಇಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮನಗೆದ್ದಿವೆ ಎಂದರು.
ನಟ ಧನ್ವೀರ್ ಅವರನ್ನು ಸನ್ಮಾನಿಸಲಾಯಿತು. ಚಿತ್ರಮಂದಿರದ ಮಾಲೀಕ ಸುಂದರೇಶ್ ಮೂರ್ತಿ, ಶಿವಬಸವ ಸ್ವಾಮಿ, ರಕ್ಷಿತ್ ಮಾಂಬಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.