ADVERTISEMENT

ಕೊಳ್ಳೇಗಾಲ| ನಗರಸಭೆಯ ನೀರಿನಲ್ಲಿ ಹುಳು: ದೂರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:21 IST
Last Updated 2 ಮಾರ್ಚ್ 2026, 2:21 IST
ನೀರಿನಲ್ಲಿ ಹುಳು
ನೀರಿನಲ್ಲಿ ಹುಳು   

ಕೊಳ್ಳೇಗಾಲ: ಇಲ್ಲಿನ ಮುಡಿಗುಂಡದ ನಾಯಕರ ಹೊಸ ಬಡಾವಣೆಯಲ್ಲಿ  7 ಮನೆಗಳ ಕುಡಿಯುವ ನೀರಿನಲ್ಲಿ ಹುಳುಗಳು ಪತ್ತೆಯಾಗಿವೆ  ಎಂದು ಅಲ್ಲಿನವರು ದೂರಿದ್ದಾರೆ.

ಬಡಾವಣೆಯ ನಿವಾಸಿ ಲಿಂಗರಾಜು, ಮಂಗಳಮ್ಮ, ಗಾಯತ್ರಿ, ಉಮಾ, ರತ್ನಮ್ಮ, ನೇತ್ರ, ಲಕ್ಷ್ಮಮ್ಮ, ರಾಣಿ ಎಂಬುವರು ತಮ್ಮ ಮನೆಗಳಿಗೆ ಸರಬರಾಜಾಗುವ ಕುಡಿಯುವ ನೀರಿನಲ್ಲಿ ಒಂದು ವಾರಗಳಿಂದಲೂ ಹುಳುಗಳು  ಬರುತ್ತಿದೆ ಎಂದು ದೂರಿದ್ದಾರೆ.

‘ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಅಧಿಕಾರಿಗಳಿಗೆ ನೀರಿನಲ್ಲಿ ಹುಳು ಇರುವ ಫೋಟೋವನ್ನು ಹಾಕಿದರೂ  ಉತ್ತರಿಸುತ್ತಿಲ್. ಈಗ ಕುಡಿಯಲು ನೀರು ತೆಗೆದುಕೊಳ್ಳಲು ಭಯ ವಾಗಿದೆ. ಇದರ ಬಗ್ಗೆ ಗಮನ ಹರಿಸಿ ನಲ್ಲಿಯನ್ನು ಸರಿಪಡಿಸಬೇಕು’ ಎಂದು ಬಡಾವಣೆಯ ನಿವಾಸಿಗಳು ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.