ADVERTISEMENT

ತೊಂಡವಾಡಿ ಗ್ರಾಮದಲ್ಲಿ ಚಿನ್ನಾಭರಣ ದೋಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:24 IST
Last Updated 19 ಡಿಸೆಂಬರ್ 2025, 7:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಗುಂಡ್ಲುಪೇಟೆ: ತಾಲ್ಲೂಕಿನ ತೊಂಡವಾಡಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ತೆಗೆದು ಒಳನುಗ್ಗಿದ ಕಳ್ಳನೊಬ್ಬ ಹಾಸಿಗೆ ಬಳಿ ಇಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ADVERTISEMENT

ತೊಂಡವಾಡಿ ಗ್ರಾಮದ ಟಿ.ಎಸ್.ಸುಶೀಲಮ್ಮ ಮನೆಯಲ್ಲಿ ಡಿ.16ರ ಮಧ್ಯರಾತ್ರಿ ಒಬ್ಬರೇ ಮಗಲಿರುವಾಗ, ಮನೆಯ ಮೇಲ್ಚಾವಣಿ ಮೂಲಕ ಒಳ ನುಗ್ಗಿರುವ ಕಳ್ಳ, ಹಾಸಿಗೆ ಬಳಿ ಇಟ್ಟಿದ ರೋಲ್ಡ್‌ಗೋಲ್ಡ್‌ ಸರ, ಅದರಲ್ಲಿದ್ದ ನಾಲ್ಕು ಗ್ರಾಂ ತೂಕದ 2 ಚಿನ್ನದ ತಾಳಿ ಹಾಗೂ ಮೂರು ಗ್ರಾಂ ತೂಕದ ನಾಲ್ಕು ಚಿನ್ನದ ಗುಂಡುಗಳನ್ನು (ಚಿನ್ನದ ಅಂದಾಜು ಮೌಲ್ಯ ಸುಮಾರು ₹ 70 ಸಾವಿರ) ಕದ್ದು ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಟಿ.ಎಸ್.ಸುಶೀಲಮ್ಮ ಅವರ ಮಗ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೇಗೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.