
ಪ್ರಜಾವಾಣಿ ವಾರ್ತೆ
ಯಳಂದೂರು: ‘ಗ್ರಾಮೀಣ ರಸ್ತೆಗಳನ್ನು ಸರ್ವ ಋತು ರಸ್ತೆಗಳನ್ನಾಗಿ ರೂಪಿಸಲು ಆದ್ಯತೆ ನೀಡಲಾಗುವುದು’ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ತಾಲ್ಲೂಕಿನ ಕಿನಕಹಳ್ಳಿ - ಕುಂತೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಕೃಷಿ ಚಟುವಟಿಕೆಗಳು ಹೆಚ್ಚಾಗುತ್ತವೆ. ರೈತರು ಆರ್ಥಿಕ ಹಿಡುವಳಿಗೆ ಸಹಾಯಕವಾಗಲಿದೆ. ಟೆಂಡರ್ ಮೂಲಕ ಕಾಮಗಾರಿ ನಡೆಸಬೇಕಿದ್ದು, ಆದ್ಯತೆ ಮೇರೆಗೆ 3 ತಾಲ್ಲೂಕುಗಳಿಗೂ ನೆರವು ನೀಡಲಾಗುವುದು’ ಎಂದರು.
ಮುಖಂಡರಾದ ಕಿನಕಹಳ್ಳಿ ಪ್ರಭುಪ್ರಸಾದ್, ಸಿದ್ದರಾಜು, ಕಮಲ್ ನಾಗರಾಜು, ಗ್ರಾಪಂ ಅಧ್ಯಕ್ಷರಾದ ಗಂಗಾಂಬಿಕೆ, ವೆಂಕಟಾಚಲ, ತೋಟೇಶ್ ಹಾಗೂ ಇತರರು ಇದ್ದರು.
ಯರಗಂಬಳ್ಳಿ ಗ್ರಾಮದ ಪರಿಶಿಷ್ಟರ ಬೀದಿ ಮುಂಭಾಗ ಡಾ.ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಮಂಟೇಸ್ವಾಮಿ ಸಮುದಾಯ ಭವನ ನಿರ್ಮಾಣ ಮಾಡಲು ಶಾಸಕ ಎ. ಆರ್. ಕೃಷ್ಣಮೂರ್ತಿ ಗುದ್ದಲಿ ಪೂಜೆ ನೆರವೇರಿಸಿದರು.
ಗ್ರಾ.ಪಂ. ಅಧ್ಯಕ್ಷೆ ಶೋಭಾ, ಸದಸ್ಯರಾದ ಮಹೇಶ್, ಸಿದ್ದರಾಜು, ಮಲ್ಲು, ಮಹಾದೇವಯ್ಯ, ಮುಖಂಡರಾದ ನಂಜುಂಡಸ್ವಾಮಿ ಹಾಗೂ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.