ADVERTISEMENT

ಚಾಮರಾಜನಗರ | 100 ಕೆಜಿ ಶ್ರೀಗಂಧ ವಶ: ಆರೋಪಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:24 IST
Last Updated 13 ಅಕ್ಟೋಬರ್ 2025, 2:24 IST
ಹನೂರು ತಾಲ್ಲೂಕಿನ ಮಂಗಲ ಗ್ರಾಮದ ಮನೆಯೊಂದರ ಬೀರುವಿನಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ ಶ್ರೀಗಂಧದ ತುಂಡುಗಳು
ಹನೂರು ತಾಲ್ಲೂಕಿನ ಮಂಗಲ ಗ್ರಾಮದ ಮನೆಯೊಂದರ ಬೀರುವಿನಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ ಶ್ರೀಗಂಧದ ತುಂಡುಗಳು   

ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 100 ಕೆಜಿ ಶ್ರೀಗಂಧವನ್ನು ಅರಣ್ಯಾಧಿಕಾರಿಗಳು ಭಾನುವಾರ ವಶಪಡಿಸಿಕೊಂಡಿದ್ದಾರೆ.

ಗ್ರಾಮದ ರಾಜಮ್ಮ ಎಂಬುವರ ಮನೆಯಲ್ಲಿ ಶ್ರೀಗಂಧವನ್ನು ಸಂಗ್ರಹಿಸಿರುವ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಮಲೆ ಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯದ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಮನೆಯ ಪ್ರತಿ ಭಾಗವನ್ನೂ ಹುಡುಕಾಡಿದಾಗ ನಾಲ್ಕೈದು ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧದ ತುಂಡುಗಳು ಪತ್ತೆಯಾಗಿದೆ.

ಬೀರುವಿನಲ್ಲಿ ಶ್ರೀಗಂಧ: ಆರೋಪಿಯು ಮನೆಯಲ್ಲಿದ್ದ ಬೀರುವಿನಲ್ಲೂ ಶ್ರೀಗಂಧದ ತುಂಡುಗಳನ್ನು ಇರಿಸಿದ್ದು ದಾಳಿವೇಳೆ ಪತ್ತೆಯಾಗಿದೆ. ಮನೆಯಲ್ಲಿದ್ದ ದೇವಮ್ಮ ಎಂಬ ಮಹಿಳೆಯನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ADVERTISEMENT

ಆರೋಪಿಗಾಗಿ ಹುಡುಕಾಟ: ಪ್ರಕರಣದ ಪ್ರಮುಖ ಆರೋಪಿ ಹಲವು ವರ್ಷಗಳಿಂದಲೂ ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಂಗ್ರಹಿಸಿಡುವ ಹಾಗೂ ಮಾರಾಟ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗವಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹನೂರು ತಾಲ್ಲೂಕಿನ ಮಂಗಲ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧದ ತುಂಡುಗಳು