ADVERTISEMENT

ಹುಲಿಯ ಬಾಯಿಂದ ತಪ್ಪಿಸಿಕೊಂಡು ಬಂದ ಹಸು!

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 11:51 IST
Last Updated 9 ಆಗಸ್ಟ್ 2021, 11:51 IST
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಹುಲಿ ದಾಳಿಗೆ ಗಾಯಗೊಂಡ ಹಸು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಹುಲಿ ದಾಳಿಗೆ ಗಾಯಗೊಂಡ ಹಸು.   

ಗುಂಡ್ಲುಪೇಟೆ: ಹುಲಿ ದಾಳಿಗೆ ಹಸುವೊಂದು ಗಾಯಗೊಂಡಿರುವ ಘಟನೆ ತಾಲೂಕಿನ ತೆರಕಣಾಂಬಿ ಬಳಿಯ ಬಪರ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ತೆರಕಣಾಂಬಿ ಗ್ರಾಮದ ಪುಟ್ಟಸ್ವಾಮಿ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಶನಿವಾರ ಎಂದಿನಂತೆ ದನಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿದ್ದ ಹುಲಿ ಹಸುವಿನ ಮೇಲೆರಗಿದೆ. ಜೊತೆಯಲ್ಲಿ ಮೇಯುತ್ತಿದ್ದ ಉಳಿದ ಹಸುಕರುಗಳು ಬೆದರಿ ಓಡುವಾಗ ದನಗಾಹಿ ಪುಟ್ಟಸ್ವಾಮಿ ಜೋರಾಗಿ ಕೂಗಿದಾಗ ಹುಲಿ ಹಸುವನ್ನು ಬಿಟ್ಟು ಮರೆಯಾಗಿದೆ.

ಹಸುವಿನ ಭುಜ, ಹೊಟ್ಟೆಯ ಎರಡು ಭಾಗದಲ್ಲಿ ಹುಲಿ ಉಗುರಿನಿಂದ ಆಳವಾದ ಗಾಯವಾಗಿವೆ. ಹಸುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ADVERTISEMENT

ಈ ಭಾಗದಲ್ಲಿ ಜಿಂಕೆ ಸಂತತಿ ಕಡಿಮೆಯಾಗಿದ್ದು, ಈಗ ಹುಲಿ ಹಸುವಿನ ಮೇಲೆರಗಲು ಕಾರಣವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶವದಲ್ಲಿ ರೈತರ ಜಮೀನುಗಳಲ್ಲೂ ಹುಲಿ ಸಂಚರಿಸುತ್ತಿದೆ. ಆದ್ದರಿಂದ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.