ADVERTISEMENT

ಚಾಮರಾಜನಗರ: ಗಸ್ತು ನಡೆಸುವಾಗ ಹುಲಿ ದಾಳಿಗೆ ವ್ಯಕ್ತಿ ಬಲಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 11:43 IST
Last Updated 27 ಡಿಸೆಂಬರ್ 2025, 11:43 IST
<div class="paragraphs"><p> ಮೃತಪಟ್ಟ ಸಣ್ಣ ಹೈದ ಹಾಗೂ&nbsp;ಹುಲಿಯ ಸಾಂದರ್ಭಿಕ ಚಿತ್ರ</p></div>

ಮೃತಪಟ್ಟ ಸಣ್ಣ ಹೈದ ಹಾಗೂ ಹುಲಿಯ ಸಾಂದರ್ಭಿಕ ಚಿತ್ರ

   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಳ್ಳಬೇಟೆ ಶಿಬಿರದಲ್ಲಿ ಶನಿವಾರ ಗಸ್ತು ನಡೆಸುವಾಗ ಹುಲಿ ದಾಳಿಗೆ ಸಣ್ಣ ಹೈದ(55) ಎಂಬುವರು ಮೃತಪಟ್ಟಿದ್ದಾರೆ.

ಬಂಡೀಪುರ ವಲಯದ ಮರಳಹಳ್ಳ ಕ್ಯಾಂಪ್ ಬಳಿ ಗಸ್ತಿನಲ್ಲಿದ್ದಾಗ ದಾಳಿ ನಡೆದಿದೆ. ಮೃತ ವ್ಯಕ್ತಿಯ ಜತೆಯಲ್ಲಿ ಗಸ್ತಿನಲ್ಲಿದ್ದ ಇಬ್ಬರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣ ಹೈದ ಅವರ ದೇಹವನ್ನು ಹುಲಿ ಎಳೆದೊಯ್ಯುತ್ತಿರುವುದನ್ನು ನೋಡಿದ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.

ADVERTISEMENT

ಹುಲಿ ಮೃತ ವ್ಯಕ್ತಿಯ ದೇಹದ ಭಾಗವನ್ನು ತಿಂದಿಲ್ಲ, ಪರಚಿದ ಗಾಯಗಳಾಗಿವೆ. ಶವವನ್ನು ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಲಯಾರಣ್ಯಾಧಿಕಾರಿ ಮಹದೇವು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.