
ಪ್ರಜಾವಾಣಿ ವಾರ್ತೆ
ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು, ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಜೆಡಿಎಸ್ ವತಿಯಿಂದ ಶನಿವಾರ ಉಚಿತ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
ಜೆಡಿಎಸ್ ನಾಯಕ ಹರಿನಾಥರೆಡ್ಡಿ ಮಾತನಾಡಿ, ‘ಹೆಲ್ಮೆಟ್ ಧರಿಸದೆ ದ್ವಿಚಕ್ರ ಚಾಲನೆ ಮಾಡುವುದರಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು’ ಎಂದರು.
ಮುಖಂಡ ಜೆ.ಪಿ.ಚಂದ್ರಶೇಖರರೆಡ್ಡಿ, ಶ್ರೀನಿವಾಸರೆಡ್ಡಿ, ಗೂಳೂರು ವಿನೋದ್, ಬೈರೆಡ್ಡಿ, ಬೈರಪ್ಪ, ಸುದರ್ಶನ ನಾಯ್ಡು, ಶ್ರೀಕಾಂತ್, ನಾರಾಯಣ ನಾಯಕ್, ಚೌಡಪ್ಪ, ಸುರೇಶ್, ಗಂಗುಲಪ್ಪ, ಅಶ್ವಥ್ಥಪ್ಪ, ಪ್ರಭಾಕರರೆಡ್ಡಿ, ಶ್ರೀನಾಥ್ ಇದ್ದರು.