ADVERTISEMENT

ಬಾಗೇಪಲ್ಲಿ ಚೆಕ್‌ಪೋಸ್ಟ್‌: 5.5 ಕೆ.ಜಿ ಚಿನ್ನ ಜಪ್ತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 4:58 IST
Last Updated 8 ಏಪ್ರಿಲ್ 2023, 4:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗೇಪಲ್ಲಿ (ಚಿಕ್ಕಬಳ್ಳಾಪುರ ಜಿಲ್ಲೆ): ಬಾಗೇಪಲ್ಲಿ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಕಾರಿನಲ್ಲಿ ಸಾಗಿಸುತ್ತಿದ್ದ ₹ 2.66 ಕೋಟಿ ಮೌಲ್ಯದ 5.585 ಕೆ.ಜಿ ಚಿನ್ನವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆಂಧ್ರಪ್ರದೇಶದ ಕರ್ನೂಲಿನ ಚಿನ್ನಾಭರಣ ಮಾರಾಟ ಅಂಗಡಿಯಿಂದ ವಿಜಯವಾಡದ ಚಿನ್ನಾಭರಣ ಮಾರಾಟ ಅಂಗಡಿಗೆ ಈ ಚಿನ್ನ ಸಾಗಿಸಲಾಗುತ್ತಿತ್ತು ಎಂದು ಸಾಗಾಣಿಕೆದಾರರು ತಿಳಿಸಿದ್ದಾರೆ. ಆದರೆ, ಗಡಿ ಭಾಗದ ಬಾಗೇಪಲ್ಲಿ ಚೆಕ್‌ ಪೋಸ್ಟ್‌ಗೆ ಏಕೆ ಬಂದರು ಎಂದು ಅಧಿಕಾರಿಗಳು ಅನುಮಾನಿಸಿದ್ದಾರೆ.

‘ನಮ್ಮ ಗಡಿ ಭಾಗದ ಚೆಕ್‌ಪೋಸ್ಟ್‌ಗೆ ಬಂದಿದ್ದರಿಂದ ಚಿನ್ನ ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ. ಸದ್ಯಕ್ಕೆ ಚಿನ್ನವನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ’ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬೆಳ್ಳಿ, ಬಿಸ್ಕತ್‌,ನಗದು ಜಪ್ತಿ (ಮುಳಬಾಗಿಲು ವರದಿ): ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 3 ಲಕ್ಷ ಮೌಲ್ಯದ 4.9 ಕೆ.ಜಿ ತೂಕದ ಬೆಳ್ಳಿ ಬಿಸ್ಕತ್‌ ಹಾಗೂ ₹ 5 ಲಕ್ಷ ನಗದನ್ನು ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.