
ಪ್ರಜಾವಾಣಿ ವಾರ್ತೆಬೆಸ್ಕಾಂ ಸಿಬ್ಬಂದಿ ಕಡತ ಪರಿಶೀಲಿಸುತ್ತ ಮದ್ಯ ಸೇವನೆ
ಗುಡಿಬಂಡೆ: ಗುಡಿಬಂಡೆ ಬೆಸ್ಕಾಂ ಸಿಬ್ಬಂದಿ ಡಾಬಾದಲ್ಲಿ ಕುಳಿತು ಮದ್ಯಪಾನ ಮಾಡುತ್ತ ಇಲಾಖೆಯ ಕಡತಗಳನ್ನು ಪರಿಶೀಲಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬೆಸ್ಕಾಂ ಉಪ ವಿಭಾಗದಲ್ಲಿ ಕಿರಿಯ ಎಂಜಿನಿಯರ್ ರಾಘವೇಂದ್ರ ಮತ್ತು ಸಿಬ್ಬಂದಿ ಡಾಬಾದಲ್ಲಿ ಮದ್ಯ ಸೇವಿಸುತ್ತ ಕಡತ ಪರಿಶೀಲಿಸುತ್ತಿದ್ದಾರೆ.
ಈ ವಿಡಿಯೊಗಳು ಸಾರ್ವಜನಿಕ ವಲಯ ಮತ್ತು ಇಲಾಖೆಯಲ್ಲಿ ಚರ್ಚೆಗೂ ಕಾರಣವಾಗಿದೆ. ಈ ವಿಡಿಯೊ ಒಂದು ತಿಂಗಳ ಹಿಂದಿನದ್ದು ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.