ADVERTISEMENT

ಚಿಮುಲ್ ಚುನಾವಣೆ: ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಭಾರಿ ಪೊಲೀಸ್ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:33 IST
Last Updated 1 ಫೆಬ್ರುವರಿ 2026, 5:33 IST
   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತದಾನ ನಡೆಯುತ್ತಿದೆ.

ಸಂಜೆ 4ರವರೆಗೆ ಮತದಾನ ನಡೆಯಲಿದ್ದು ಕಾಲೇಜು ಸುತ್ತಮುತ್ತ ಪೊಲೀಸರು ಬಂದೋಬಸ್ತ್ ಇದೆ. ಇಬ್ಬರು ಡಿವೈಎಸ್ ಪಿ, ನಾಲ್ಕು ಮಂದಿ ಸಿಪಿಐ, 12 ಜನ ಪಿಎಸ್ ಐ ಸೇರಿದಂತೆ 215 ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನೇಮಿಸಲಾಗಿದೆ.

ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು. ಮತದಾನದ ತರುವಾಯ ಎಣಿಕೆ ಕಾರ್ಯ ನಡೆಯಲಿದೆ. ಸಂಜೆಯ ವೇಳೆಗೆ ಸೋಲು ಗೆಲುವಿನ ಫಲಿತಾಂಶ ಹೊರ ಬೀಳಲಿದೆ.

ADVERTISEMENT

ಚಿಮುಲ್‌ನ 13 ಕ್ಷೇತ್ರಗಳಿಗೆ ಒಟ್ಟು 28 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಚಿಕ್ಕಬಳ್ಳಾಪುರ ಮಹಿಳೆ ಮತ್ತು ಮಂಚೇನಹಳ್ಳಿ ಕ್ಷೇತ್ರಗಳಲ್ಲಿ ಮಾತ್ರ ಮೂವರು ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇದೆ. ಉಳಿದ ಎಲ್ಲ ಕ್ಷೇತ್ರಗಳಲ್ಲಿಯೂ ನೇರಾ ನೇರ ಹಣಾಹಣಿ ಇದೆ. ಕಾಂಗ್ರೆಸ್ ಬೆಂಬಲಿತರು ಮತ್ತು ಜೆಡಿಎಸ್‌, ಬಿಜೆಪಿ (ಎನ್‌ಡಿಎ) ಬೆಂಬಲಿತರ ನಡುವೆ ಚುನಾವಣಾ ಸಮರ ನಡೆದಿದೆ. 13 ಕ್ಷೇತ್ರಗಳಿಂದ ಒಟ್ಟು 952 ಡೆಲಿಗೇಟ್‌ (ಮತದಾರರು) ಹಕ್ಕು ಚಲಾಯಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.