
ಚಿಂತಾಮಣಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸೋಮವಾರ ನಗರದ ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ವಾಣಿಜ್ಯಕ್ಕಾಗಿ ಬಳಸುತ್ತಿದ್ದ 17 ಗೃಹಬಳಕೆಯ ಗ್ಯಾಸ್ ಸಿಲಿಂಡಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹೋಟೆಲ್‌ಗಳಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ಬಳಕೆ ವ್ಯಾಪಕವಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಇನ್‌ಸ್ಪೆಕ್ಟರ್ ನಟರಾಜ್ ನೇತೃತ್ವದ ತಂಡವು ಅನೇಕ ಹೋಟೆಲ್‌ಗಳ ಮೇಲೆ ದಾಳಿ ನಡೆಸಿತು.
ನಗರದ ವಿವಿ ಫಾಸ್ಟ್ ಪುಡ್ ಹೋಟೆಲ್‌ನಲ್ಲಿ 2, ವಿ.ಆರ್ಯಭವನ್‌ನಲ್ಲಿ 2, ಮದೀನಾ ಹೋಟೆಲ್‌ನಲ್ಲಿ 2, ರಾಮಚಂದ್ರ ಟೀ ಸ್ಟಾಲ್. ಬಾಲಾಜಿ ಟಿಫನ್ ಸೆಂಟರ್, ರೆಡ್ಡಿ ಮಲ್ಟ್ರಿ ಹೋಟೆಲ್, ರಂಗನಾಥ ಎಗ್ ಅಂಡ್ ರೈಸ್ ಹೋಟೆಲ್, ಕೇಕ್ ನೆಕ್ಟ್ ಬೇಕರಿ, ಲಕ್ಷ್ಮಿ ವೆಂಕಟೇಶ್ವರ ಟೀ ಸ್ಟಾಲ್, ತಳ್ಳುವ ಗಾಡಿ, ದುರ್ಗಾ ಟಿಫನ್ ಸೆಂಟರ್, ಭೈರವೇಶ್ವರ ಕಾಂಡಿಮೆಂಟ್ಸ್, ಶ್ರಾವಣಿ ಫುಡ್ಸ್ ಅಂಡ್ ಚಾಟ್ಸ್, ಬಂಗಾರಪೇಟೆ ಪಾನಿಪುರಿ ಕೇಂದ್ರಗಳಿಂದ ತಲಾ ಒಂದು ಸಿಲೆಂಡರ್ ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ಹೋಟೆಲ್‌ಗಳ ವಿರುದ್ಧ ಮೊಕದ್ದಮೆ ದಾಖಲಿಸಲು ಜಂಟಿ ನಿರ್ದೇಶಕರಿಗೆ ವರದಿ ಸಲ್ಲಿಸಲಾಗುವುದು ಎಂದು ನಟರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.