ADVERTISEMENT

ಜೈನ ಧರ್ಮೀಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಕೆ.ಎಚ್.ಪದ್ಮರಾಜ್ ಜೈನ್

ಕೆಪಿಸಿಸಿ ಸದಸ್ಯ ಕೆ.ಎಚ್.ಪದ್ಮರಾಜ್ ಜೈನ್ ವಿಷಾದ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 5:42 IST
Last Updated 25 ಜನವರಿ 2021, 5:42 IST
ಕೆ.ಎಚ್.ಪದ್ಮರಾಜ್ ‌ಜೈನ್
ಕೆ.ಎಚ್.ಪದ್ಮರಾಜ್ ‌ಜೈನ್   

ಚಿಕ್ಕಬಳ್ಳಾಪುರ: ‘ಇತ್ತೀಚಿನ ಬೆಳವಣಿಗೆಗಳಲ್ಲಿ ಜೈನಧರ್ಮ ಹಾಗೂ ಜೈನ ಧರ್ಮೀಯರಿಗೆ ರಕ್ಷಣೆ ಇಲ್ಲದಂತಾಗುವುದು ವಿಷಾದದ ಸಂಗತಿಯಾಗಿದೆ’ ಎಂದು ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಮಿತಿ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯರಾದ ಕೆ.ಎಚ್.ಪದ್ಮರಾಜ್ ಜೈನ್ ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಜೈನಧರ್ಮದ ಸಾಹಿತಿ ಹಂಪನಾಗರಾಜಯ್ಯ ಅವರು ಪ್ರಾಥಮಿಕ ಭಾಷಣದಲ್ಲಿ ದೇಶದಲ್ಲಿ ರೈತರು ಈ ದೇಶದ ಬೆನ್ನೆಲುಬು. ಅವರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಭಾವಿಸುತ್ತಾ ರೈತರ ದೆಹಲಿಯ ಹೊರವಲಯದಲ್ಲಿ ಪಡುತ್ತಿರುವ ಕಷ್ಟಗಳ ಬಗ್ಗೆ ಕೇಂದ್ರ ಕೇಂದ್ರ ಸರ್ಕಾರದ ನಡೆ ವಿರುದ್ಧ ಕೆಲವೊಂದು ಮಾತುಗಳನ್ನು ಆಡಿರುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಒಬ್ಬ ಪೊಲೀಸರಿಗೆ ದೂರು ನೀಡಿದ್ದು, ಅದರ ಮೇರೆಗೆ ಹಂಪನಾಗರಾಜಯ್ಯ ಅವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವುದು ಸರಿಯಲ್ಲ’ ಎಂದರು.

ADVERTISEMENT

‘ಇದು ಜೈನ ಧರ್ಮೀಯರಿಗೆ ಮಾಡಿದ ಅವಮಾನವಾಗಿದೆ. ಏಕೆಂದರೆ ಜೈನ ಧರ್ಮೀಯರು ಭಾರತದ ಇತಿಹಾಸದ ಗತ ವೈಭವಕ್ಕೆ ಅನೇಕ ರೀತಿಯ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಹಿರಿಯ ಸಾಹಿತಿ ಹಂಪನಾಗರಾಜಯ್ಯ ಅವರು ನಮ್ಮ ಜೈನಧರ್ಮದ ಸಾಹಿತ್ಯದಲ್ಲಿ ಮೇರು ಶಿಖರ. ಇಂತಹವರ ಬಗ್ಗೆ ಕೀಳುಮಟ್ಟದ ರಾಜಕೀಯ ಮಾಡುವುದು ತಪ್ಪಾಗಿದೆ. ಜೈನ ಧರ್ಮೀಯರು ಅಲ್ಪಸಂಖ್ಯಾತರು ಎಂದು ಭಾವನೆಯೇ? ಅವರು ಯಾರು ಏನು ಮಾಡುವುದಿಲ್ಲ ಎಂದು ಉಡಾಫೆ ಇರಬಹುದೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.