ಚಿಂತಾಮಣಿ: ತಾಲ್ಲೂಕಿನ ಕೈವಾರದ ಅಂಬೇಡ್ಕರ್ ವಿದ್ಯಾಸಂಸ್ಥೆಯಲ್ಲಿ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟೀಯ ಗಣಿತ ದಿನವನ್ನು ಸೋಮವಾರ ಆಚರಿಸಲಾಯಿತು.
ಸಂಸ್ಥೆ ಅಧ್ಯಕ್ಷೆ ಎಸ್.ಎಂ ರೋಜ ಮಾತನಾಡಿ, ‘ಗಣಿತದ ವಿಚಾರದಲ್ಲಿ ಭಾರತವು ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಿದೆ. ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಮಾಡಿದರೆ ಗಣಿತ ಸುಲಭವಾಗಲಿದೆ. ಹೆಚ್ಚು ಗಣಿತ ಅಭ್ಯಾಸ ಮಾಡಿ ಕಲಿಕೆಯನ್ನು ಸುಲಭ ಮಾಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗಣಿತ ಶಿಕ್ಷಕಿ ಯೋಗಮ್ಮ ಮಲ್ಲಾಪುರ ಮಾತನಾಡಿ, ಗಣಿತ ಎಂದರೆ ಕಬ್ಬಿಣದ ಕಡಲೆ ಅಲ್ಲ. ಗಣಿತ ಸೂತ್ರಗಳು, ಮಗ್ಗಿಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಗಣಿತ ಸುಲಿದ ಬಾಳೆಹಣ್ಣಿನಷ್ಟೇ ಸುಲಭ. ಮುಂದುವರೆದ ಭಿನ್ನರಾಶಿ, ಸಂಖ್ಯೆ ಸಿದ್ಧಾಂತ, ಅನಂತ್ ಸರಣಿಗಳ ಸಾಧನೆ ತಿಳಿಸಿದರು.
ಮುಖ್ಯ ಶಿಕ್ಷಕ ಸುರೇಶ್ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಅವರ 125ನೇ ಜಯಂತಿಯಾದ 2012ರಲ್ಲಿ ದೇಶದಲ್ಲಿ ರಾಷ್ಟೀಯ ಗಣಿತ ದಿನಾಚರಣೆ ಆರಂಭಿಸಲಾಯಿತು. ರಾಮಾನುಜನ್ ಅವರ ಜೀವನ ಮತ್ತು ಸಾಧನೆಗಳನ್ನು ಹೇಳಿದರು.
ಗಣಿತ ದಿನದ ಕುರಿತು ಮಕ್ಕಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಕನ್ನಡ ಮಾದ್ಯಮದಲ್ಲಿ ಹರ್ಷಿಣಿ ಪ್ರಥಮ, ಹಂಸಿಕ ದ್ವಿತೀಯ, ಪ್ರೇಮ ತೃತಿಯ ಸ್ಥಾನ ಪಡೆದರು.
ಆಂಗ್ಲ ಮಾದ್ಯಮದಲ್ಲಿ ಬಿ.ಬಿ.ಫಾತಿಮಾ ಪ್ರಥಮ, ಪ್ರೀತಿ ದ್ವಿತೀಯ, ತನುಶ್ರೀ ತೃತೀಯ ಸ್ಥಾನ ಪಡೆದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಿಕ್ಷಕರಾದ ಲೋಕೇಶಪ್ಪ, ಶ್ರೀಧರ ಹಿರೇಮಠ,ಜ್ಞಾನೇಶ್ವರಿ, ಉಮೇಶ, ಹರೀಶ್, ಭಾಗ್ಯಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.