ಚಿಕ್ಕಬಳ್ಳಾಪುರ: ಭಾರತವು ಜಿ 20 ಶೃಂಗಸಭೆಯ ಆತಿಥ್ಯ ವಹಿಸಿರುವುದರಿಂದ ತಾಲ್ಲೂಕಿನ ಐತಿಹಾಸಿಕ ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲಕ್ಕೆ ವಿದ್ಯುತ್ ದೀಪಗಳಿಂದ ಮಾಡಿರುವ ಅಲಂಕಾರಕ್ಕೆ ಬುಧವಾರ ತೆರೆ ಬೀಳಲಿದೆ.
ದೇಶದ ನೂರು ಪ್ರಮುಖ ಪ್ರವಾಸಿ ತಾಣಗಳಿಗೆ ಡಿ.7ರ ವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ. ಭೋಗ ನಂದೀಶ್ವರ ದೇಗುಲದ ಮಂಟಪಗಳು, ಪಡಸಾಲೆ, ದೇಗುಲದ ಆವರಣ ಹಾಗೂ ಹೊರಭಾಗಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಜಿಲ್ಲಾಧಿಕಾರಿ,ಪುರಾತತ್ವ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ದೇಗುಲಕ್ಕೆ ಭೇಟಿ ನೀಡಿ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಿದ್ದರು.ಹೀಗೆ ಕಲ್ಲಿನ ಮಂಟಪಗಳು ಸೇರಿದಂತೆ ಇಡೀ ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದು ಇದನ್ನು ಕಣ್ತುಂಬಿಕೊಳ್ಳಲು ನಾಗರಿಕರಿಗೆ ಡಿ.7ರ ಕೊನೆಯ ದಿನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.