
ಶ್ರೀಗಂಧ ಮರ
ಗುಡಿಬಂಡೆ: ತಾಲ್ಲೂಕಿನ ಎಲ್ಲೋಡು ಗ್ರಾಮದಲ್ಲಿ 15ಕ್ಕೂ ಹೆಚ್ಚು ಶ್ರೀಗಂಧ ಹಾಗೂ ಸಿಲ್ವರ್ ಓಕ್ ಮರಗಳನ್ನು ಕಡಿದುಹಾಕಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಜಮೀನಿನ ಮಾಲೀಕ ನರಸಿಂಹರೆಡ್ಡಿ ಎಂಬುವರು ಜಿಲ್ಲಾ ಅರಣ್ಯಾಧಿಕಾರಿ ಮತ್ತು ಗುಡಿಬಂಡೆ ವಲಯ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
‘ಎಲ್ಲೋಡು ಗ್ರಾಮದ ಸರ್ವೆ ನಂ. 156/1ರ ಒಂದು ಎಕರೆ ಜಮೀನಿನಲ್ಲಿ ಅರಣ್ಯ ಇಲಾಖೆ, ನರೇಗಾ ಸಹಕಾರ ಮತ್ತು ಸ್ವಂತ ಖರ್ಚಿನಿಂದ 500 ಸಿಲ್ವರ್ ಓಕ್ ಗಿಡ ಮತ್ತು 250 ಶ್ರೀಗಂಧದ ಗಿಡಗಳನ್ನು ನಾಟಿ ಮಾಡಿದ್ದೆ. ಅವುಗಳನ್ನು ಐದು ವರ್ಷಗಳಿಂದ ಜೋಪಾನ ಮಾಡಿದ್ದೆ. ಇನ್ನೂ ಐದು ವರ್ಷಗಳಾಗಿದ್ದರೆ 30 ಲಕ್ಷಕ್ಕೆ ಮಾರಾಟ ಮಾಡಬಹುದಾಗಿತ್ತು. ಆದರೆ, ದುಷ್ಕರ್ಮಿಗಳು ಮರಗಳನ್ನು ಕಡಿದು ಹಾಕಿದ್ದಾರೆ’ ಎಂದು ನರಸಿಂಹರೆಡ್ಡಿ ಅವರು
ಆರೋಪಿಸಿದ್ದಾರೆ.
ಭಾನುವಾರ ರಾತ್ರಿ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು 8 ಶ್ರೀಗಂಧದ ಮರ, 10 ಸಿಲ್ವರ್ ಓಕ್ ಮರಗಳನ್ನು ಕಡಿದುಹಾಕಿ ಪರಾರಿಯಾಗಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.