
ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡಗಂಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಿಮಠ ಗ್ರಾಮದ ಹಜರತ್ ಸೈಯದ ಸಿದ್ದಿಕ್ ಅಹ್ಮದ್ ಷಾ ಖಾದ್ರಿ ಬಿಜಾಪುರಿ ಮತ್ತು ಹಜರತ್ ಸೈಯದ ಜಾಫರ್ ಸಾದಿಕ್ ಷಾ ಖಾದ್ರಿ ಬಿಜಾಪುರಿ ಗಂಧೋತ್ಸವ ಶುಕ್ರವಾರ ರಾತ್ರಿ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.
ಉರುಸ್ ಅಂಗವಾಗಿ ದರ್ಗಾ ಒಳಗೆ ಮತ್ತು ಹೊರಗೆ ವಿವಿಧ ಹೂವುಗಳಿಂದ ಅಲಂಕರಿಸಲಾಯಿತು. ವಿದ್ಯುತ್ ದೀಪಗಳು ಜಗಮಗಿಸುತ್ತಿದ್ದವು. ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿದರು.
ಪ್ರತಿ ವರ್ಷದಂತೆ ಈ ಬಾರಿ ಗ್ರಾಮಸ್ಥರು ಮತ್ತು ದರ್ಗಾದಿಂದ ಗಂಧದ ಮೆರವಣಿಗೆ ಮಾಡಲಾಯಿತು. ಹಜರತ್ ಅನುಯಾಯಿಗಳು ವಿವಿಧ ರೀತಿಯ ಪವಾಡ ಪ್ರದರ್ಶಿಸಿ ಜನರ ಗಮನ ಸೆಳೆದರು. ಸಾವಿರಾರು ಜನರು ಗಂಧೋತ್ಸವದಲ್ಲಿ ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.