ADVERTISEMENT

ಚಿಂತಾಮಣಿಯಲ್ಲಿ ಹಂದಿಜ್ವರ; 57 ಹಂದಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:10 IST
Last Updated 29 ಆಗಸ್ಟ್ 2025, 5:10 IST
<div class="paragraphs"><p> ಹಂದಿ</p></div>

ಹಂದಿ

   

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಹೆಬ್ರಿ ಗ್ರಾಮದ ವೆಂಕಟರೆಡ್ಡಿ ಅವರ ಹಂದಿ ಫಾರ್ಮ್‌ನಲ್ಲಿ ಹಂದಿ ಜ್ವರ ಪತ್ತೆಯಾಗಿದೆ.

ಹೀಗಾಗಿ, ಶುಕ್ರವಾರ ಫಾರ್ಮ್‌ನಲ್ಲಿರುವ 57 ಹಂದಿಗಳನ್ನು ಹತ್ಯೆ ಮಾಡಲು ಪಶುಸಂಗೋಪನಾ ಇಲಾಖೆ ಮುಂದಾಗಿದೆ.

ADVERTISEMENT

ವೆಂಕಟರೆಡ್ಡಿ ಅವರ ತೋಟದಲ್ಲಿ 100ಕ್ಕೂ ಹೆಚ್ಚು ಹಂದಿಗಳು ಇದ್ದವು. ಕೆಲ ದಿನಗಳಿಂದ ಹಂತ ಹಂತವಾಗಿ 50ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ.

ಜಿಲ್ಲಾ ಪಶುಸಂಗೋಪನೆ ಇಲಾಖೆಯು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು. ಬೆಂಗಳೂರು ಮತ್ತು ಭೋಪಾಲ್‌ನಲ್ಲಿ ಪರೀಕ್ಷೆ ನಡೆದಿದ್ದವು. ಗುರುವಾರ ವರದಿ ಬಂದಿದ್ದು ಹಂದಿಗಳು ಜ್ವರದಿಂದ ಮೃತಪಟ್ಟಿರುವುದು ದೃಢವಾಗಿದೆ.

‘ಎಲೆಕ್ಟ್ರಿಕ್ ಶಾಕ್ ನೀಡಿ ಹಂದಿ ಗಳನ್ನು ಹತ್ಯೆ ಮಾಡಲಾಗುವುದು. ನಂತರ ಗುಂಡಿಯಲ್ಲಿ ಮುಚ್ಚ ಲಾಗುವುದು. ಇಲ್ಲಿ ಒಂದು‌ ಕಡೆ ಮಾತ್ರ ಸೋಂಕು ಪತ್ತೆಯಾ ಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಪಶುಸಂಗೋ ಪನೆ ಇಲಾಖೆ ಉಪನಿರ್ದೇಶಕ ರಂಗಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.