ಚಿಕ್ಕಬಳ್ಳಾಪುರ: ತಾಲ್ಲೂಕಿನ ಶ್ರೀನಿವಾಸಸಾಗರ ಜಲಾಶಯದಲ್ಲಿ ಮುಳುಗಿ ಶನಿವಾರ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಬೆಂಗಳೂರಿನ ಲಿಂಗರಾಜಪುರದ ಪೂಜಾ (21), ನಾಗವಾರ ಬಳಿಯ ಅಮರಜ್ಯೋತಿ ನಗರದ ಇಮ್ರಾನ್ ಖಾನ್ (21), ಯಲಹಂಕದ ರಾಧಿಕಾ (21) ಮೃತರು. ಈ ಮೂವರು ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಡಿ.ಫಾರ್ಮ್ ಓದುತ್ತಿದ್ದರು.
ಆರು ಮಂದಿ ಸ್ನೇಹಿತರ ಜತೆ ಇವರು ಶ್ರೀನಿವಾಸಸಾಗರಕ್ಕೆ ಪ್ರವಾಸಕ್ಕೆ ಬಂದಿದ್ದರು. ಜಲಾಶಯದ ಹಿನ್ನೀರಿಗೆ ಇಳಿದಾಗ ಮೂವರು ಮುಳುಗಿದ್ದಾರೆ. ಚನ್ನರಾಮ, ಸುನೀತಾ ಮತ್ತು ವಿಕಾಸ್ ಅಪಾಯದಿದಂದ ಪಾರಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಜಲಾಶಯದಲ್ಲಿ ಶೋಧ ಕಾರ್ಯ ನಡೆಸಿದ್ದ ಪೂಜಾ ಶವ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.