ADVERTISEMENT

ಚಿಕ್ಕಬಳ್ಳಾಪುರ: ಇಂದು, ನಾಳೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 3:07 IST
Last Updated 27 ಆಗಸ್ಟ್ 2021, 3:07 IST

ಚಿಕ್ಕಬಳ್ಳಾಪುರ: ನಿರ್ವಹಣಾ ಕಾಮಗಾರಿ ಕಾರಣ ಚಿಕ್ಕಬಳ್ಳಾಪುರ, ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಶುಕ್ರವಾರ ಮತ್ತು ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ.

ಬಾಗೇಪಲ್ಲಿ ತಾಲ್ಲೂಕಿನ ‍ಪರಗೋಡು, ಪೋಲವಾರಿಪಲ್ಲಿ, ವಡ್ಡರಪಾಳ್ಯ, ಹೊಸಕೋಟೆ, ಶ್ರೀನಿವಾಸಪುರ, ಸೋಲಮಾಕಲಪಲ್ಲಿ, ಮೋಗಿಚಿನ್ನೆಪಲ್ಲಿ, ಬುಟ್ಟವಾರಿಪಲ್ಲಿ, ಕಾರಕೋರ್ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ಬೆಳಿಗ್ಗೆ 9.30 ರಿಂದ ಬೆಳಿಗ್ಗೆ 11.30ರವರೆಗೆ, ಗುಡಿಬಂಡೆ ತಾಲ್ಲೂಕಿನ ಚೋಳ ಶೆಟ್ಟಿಹಳ್ಳಿ, ಜಿ. ಕೊತ್ತೂರು, ಎನ್. ತಾಂಡ, ಬಿ. ತಾಂಡ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 8ರಿಂದ ಬೆಳಿಗ್ಗೆ 11ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಯಾಲಗೆರೆ, ಮುಗುಳುಕುಪ್ಪೆ, ಎಸ್. ಗೊಲ್ಲಹಳ್ಳಿ, ಜಂಗಮಾರಪ್ಪನಹಳ್ಳಿ, ನಲ್ಲಗುಟ್ಟಪಾಳ್ಯ, ಕರಿಗಾನಪಾಳ್ಯ ಕೇತೇನ ಹಳ್ಳಿ, ನಾಸ್ತಿಮನಹಳ್ಳಿ, ಕಲ್ಲುಕುಂಟೆ, ಚಂಬಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

ADVERTISEMENT

ಗುಡಿಬಂಡೆ ತಾಲ್ಲೂಕಿನ ಸಾದಲಿ, ಸೋಮೇಶ್ವರ, ಸೋಮೇನಹಳ್ಳಿ, ಗೆಗ್ಗಲರಾಲಹಳ್ಳಿ, ಕುಸುವಗುಟ್ಟಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶನಿವಾರ ಮಧ್ಯಾಹ್ನ 12ರಿಂದ ‌ಮಧ್ಯಾಹ್ನ 3ರವರೆಗೆ, ಬಾಗೇಪಲ್ಲಿ ತಾಲ್ಲೂಕಿನ ಪುಲಿಗಲ್, ಸೀತರೆಡ್ಡಿಪಲ್ಲಿ, ವೆಂಕಟೇಶ್‍ಪಲ್ಲಿ, ರಾಮನ್‍ಪಾಡಿ, ಬೂದಲವಾರಿಪಲ್ಲಿ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.