
ಶಿಡ್ಲಘಟ್ಟ: 17ವರ್ಷದ ಯುವ ಪ್ರತಿಭೆ ಮೇಲೂರಿನ ವಜ್ರಲ್ ಗೌಡ ಕಳೆದ ಎರಡು ವರ್ಷಗಳಿಂದ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದಾನೆ.
ಸಂಜಯ ನಗರದ ಪರ್ಹ್ಹಾನ್ ಹುಸೇನ್ ಮಾರ್ಗದರ್ಶನದಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಜ್ರಲ್ ಗೌಡ, ಇದುವರೆಗೂ ಏಷ್ಯನ್ ಗೇಮ್ಸ್‌ನಲ್ಲಿ ಗೆಲುವಿನ ಸಾಧನೆ ಮಾಡಿದ ನಂತರ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
‘ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವುದೆಂದರೆ ಕ್ರೀಡಾಪಟುವಿಗೆ ಸಂತೋಷ ತರುತ್ತದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ಐದು ಗೋಲ್ಡ್ ಮೆಡಲ್ಸ್ ಸಾಧನೆ ಮಾಡಿದ್ದಾನೆ. ಈ ಸಾಧನೆಯಿಂದ ತಾಯಿ ಮತ್ತು ಸಹೋದರಿಯರ ಅಪಾರವಾದ ಬೆಂಬಲವಿದೆ’ ಎಂದು ವಜ್ರಲ್ ಗೌಡ ಹೆಮ್ಮೆಯಿಂದ ಹೇಳುತ್ತಾರೆ.
‘16ನೇ ವಯಸ್ಸಿನಿಂದಲೇ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಏನಾದರೂ ವಿಶೇಷವಾದ ಸಾಧನೆ ಮಾಡಬೇಕೆಂಬ ಹಂಬಲದಿಂದ ಅಭ್ಯಾಸದಲ್ಲಿ ತೊಡಗಿದೆ. ಪರಿಣಾಮವಾಗಿ ವರ್ಲ್ಡ್ ಕಪ್‌ನಲ್ಲಿ ಐದು ಪದಕ ಗೆಲ್ಲುವ ಸಾಧನೆ ದಾಖಲಿಸಲು ಸಾಧ್ಯವಾಗಿದೆ. ರಷ್ಯಾದ ಖಜಕಿಸ್ತಾನ ಸೇರಿದಂತೆ ಏಳು ದೇಶಗಳ ಸ್ಪರ್ಧಿಗಳ ನಡುವೆ ಸ್ಪರ್ಧೆ ಇತ್ತು. ಭಾರತ ದೇಶದ ಪ್ರತಿನಿಧಿಯಾಗಿ ತೋರಿದ ಉತ್ತಮ ಸಾಧನೆ ಕಾರಣಕ್ಕಾಗಿ ಪದಕಗಳ ಗುರಿ ತಲುಪಲು ಸಾಧ್ಯವಾಯಿತು’ ಎಂದು ಹೇಳಿದರು.
ಕಂಬದಹಳ್ಳಿ ಬಿಜೆಪಿ ಮುಖಂಡ ಸುರೇಂದ್ರ, ಕಾಂಗ್ರೆಸ್ ಮುಖಂಡ ಕೆ. ಮಂಜುನಾಥ್ ಸೇರಿದಂತೆ ಹಲವರು ಬಾಲಕನ ಸಾಧನೆಯನ್ನು ಮಕ್ತವಾಗಿ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.