ADVERTISEMENT

ಚಿಂತಾಮಣಿ: ಯಗವಕೋಟೆಯಲ್ಲಿ ವಾಸವಿ ಬೆಳ್ಳಿಹಬ್ಬ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:53 IST
Last Updated 2 ಮಾರ್ಚ್ 2026, 5:53 IST
<div class="paragraphs"><p>ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಗ್ರಾಮದಲ್ಲಿ ವಾಸವಿ ಬೆಳ್ಳಿ ಹಬ್ಬದ ಅಂಗವಾಗಿ ಮಾಡಿದ್ದ ಅಲಂಕಾರ</p></div>

ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಗ್ರಾಮದಲ್ಲಿ ವಾಸವಿ ಬೆಳ್ಳಿ ಹಬ್ಬದ ಅಂಗವಾಗಿ ಮಾಡಿದ್ದ ಅಲಂಕಾರ

   

ಚಿಂತಾಮಣಿ: ತಾಲ್ಲೂಕಿನ ಯಾಗವಕೋಟೆ ಗ್ರಾಮದಲ್ಲಿ ವಾಸವಿ ಕನ್ನಿಕಾ ಪರಮೇಶ್ವರಿ ಪ್ರತಿಷ್ಠಾಪನೆಯಾಗಿ 25 ವರ್ಷ ತುಂಬಿರುವುದರಿಂದ ವಾಸವಿ ಬೆಳ್ಳಿಹಬ್ಬವನ್ನು ಆಚರಿಸಲಾಯಿತು.

ಶನಿವಾರ ಗಣಪತಿ ಹೋಮ, ಮೃತ್ಯುಂಜಯ ಹೋಮ ಹಾಗೂ ವಾಸವಿ ಹೋಮ ಏರ್ಪಡಿಸಲಾಗಿತ್ತು. ಭಾನುವಾರ ಬ್ರಹ್ಮ ಕಳಶ, ವಾದ್ಯ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಪಂಚಾಮೃತದೊಂದಿಗೆ ಅಭಿಷೇಕ ಮಾಡಲಾಯಿತು.

ADVERTISEMENT

ಗ್ರಾಮದ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ರಾಧಾಕೃಷ್ಣಯ್ಯ ಶೆಟ್ಟಿ ಹಾಗೂ ವಾಸವಿ ಯುವಜನ ಸಂಘದ ಅಧ್ಯಕ್ಷ, ಮಂಡಳಿ ಸದಸ್ಯರು ಹಾಗೂ ವಾಸವಿ ಮಹಿಳಾ ಮಂಡಳಿ ಸದಸ್ಯರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

ವಾಸವಿ ನಂದಾದೀಪದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾಯಂದಿರಿಗೆ ಮಡಿಲು ತುಂಬಲಾಯಿತು. ಮಹಾಗಣಪತಿ ಹಾಗೂ ಸತ್ಯನಾರಾಯಣ ಮೂರ್ತಿಗಳಿಗೆ ಅಲಂಕಾರ ಏರ್ಪಡಿಸಲಾಗಿತ್ತು.

ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಗ್ರಾಮದಲ್ಲಿ ವಾಸವಿ ಬೆಳ್ಳಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.