
ಚಿಕ್ಕಬಳ್ಳಾಪುರ: 2028ಕ್ಕೆ ನಾನೇ ಕರ್ನಾಟಕದ ಮುಖ್ಯಮಂತ್ರಿಯಾಗುವೆ. ಆಗ ಗಣೇಶನ ವಿಗ್ರಹದ ಮೇಲೆ ಕಲ್ಲು ಹೊಡೆದವರ ಮನೆಗಳ ಮೇಲೆ ಬುಲ್ಡೋಜರ್ ಹರಿಸುವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ತಾಲ್ಲೂಕಿನ ಕವರನಹಳ್ಳಿಯಲ್ಲಿ ನಡೆದ ಗೋದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಸರ್ಕಾರ ತೆಗೆದುಕೊಂಡು ಬರುತ್ತೇನೆ. ವಿಧಾನಸೌಧದ ಮುಂದೆ ಜೆಸಿಬಿ ನಿಲ್ಲಿಸುತ್ತೇನೆ. ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿದವರ ಮನೆಗಳು ಡಮಾರ್ ಎಂದು ಹೇಳಿದರು.
ನನ್ನ ಮೇಲೆ 72 ಪ್ರಕರಣಗಳನ್ನು ದಾಖಲಿಸಿದ್ದಾರೆ. ನಾನು ದೇಶ, ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಿದ್ದೇನೆ. ಯತ್ನಾಳ್ ಕೆಟ್ಟ ಕೆಲಸ ಮಾಡುವುದಿಲ್ಲ. ದೇಶ ಮತ್ತು ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಾನೆ ಎಂದು ನ್ಯಾಯಾಲಯಗಳಿಗೂ ಗೊತ್ತು. ನ್ಯಾಯಾಲಯಗಳು ಇಲ್ಲದಿದ್ದರೆ ನಾವು ಕಾಯಂ ಜೈಲಿನಲ್ಲಿಯೇ ಇರಬೇಕಾಗಿತ್ತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.