
ಮಿಟ್ಟೇಮರಿ(ಬಾಗೇಪಲ್ಲಿ): ತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ ಮಿಟ್ಟೇಮರಿ ಸೇರಿದಂತೆ ಅನೇಕ ಕೆರೆಗಳಿಗೆ ನೀರು ಹರಿಸಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದು. ಇದರಿಂದ ಕುಡಿಯುವ ನೀರು ಮತ್ತು ಕೃಷಿ ಬೆಳೆಗಳಿಗೆ ಅನುಕೂಲ ಆಗಲಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ತಾಲ್ಲೂಕಿನ ಮಿಟ್ಟೇಮರಿ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿ 2024-25ನೇ ಸಾಲಿನ ಮಿಟ್ಟೇಮರಿ ಗ್ರಾಮ ಪಂಚಾಯಿತಿ, ವರ್ಗ 1ರ ಯೋಜನೆಯಡಿ ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಗ್ರಾಮ ಪಂಚಾಯಿತಿ ಅಂಗಡಿ ಮಳಿಗೆ ಕಟ್ಟಡ ಉದ್ಘಾಟನೆ ಬುಧವಾರ ನಡೆಯಿತು.
ಸರ್ಕಾರದ ಅನುದಾನಗಳ ಜತೆಗೆ ಪಂಚಾಯಿತಿ ಅನುದಾನಗಳಲ್ಲಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮಿಟ್ಟೇಮರಿ ಗ್ರಾಮ ಪಂಚಾಯಿತಿಯಿಂದ 4 ಕಟ್ಟಡ ನಿರ್ಮಾಣ ಮಾಡಲಿದೆ ಎಂದರು.
ಕಾರಕೂರು ಕ್ರಾಸ್‍ನಿಂದ ಶಿಡ್ಲಘಟ್ಟ ತಾಲ್ಲೂಕಿನ ಗಡಿವರೆಗೆ ಡಬಲ್‍ರಸ್ತೆ ಮಾಡಿಸಲಾಗಿದೆ. ಮಿಟ್ಟೇಮರಿ ಮುಖ್ಯರಸ್ತೆಯಲ್ಲಿ ರಸ್ತೆ ದ್ವಿಭಜಕ ಮಾಡಿ ಮಧ್ಯದಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿದೆ. ಎಚ್.ಎನ್.ವ್ಯಾಲಿಯ 2ನೇ ಹಂತದ ಸಂಸ್ಕರಿಸಿದ ನೀರನ್ನು ಕಾಟೇನಹಳ್ಳಿ, ಮಲ್ಲಿಗುರ್ಕಿ, ಆಚೇಪಲ್ಲಿ ಸೇರಿದಂತೆ 24 ಕೆರೆಗಳಿಗೆ ನೀರು ತುಂಬಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ತಾಲ್ಲೂಕಿನಲ್ಲಿ ಗಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ ₹200 ಕೋಟಿ ಅನುದಾನ ನೀಡಿದೆ. ಇದರಿಂದ ಪಾತಪಾಳ್ಯ, ಗೂಳೂರು, ಚೇಳೂರು ತಾಲ್ಲೂಕುಗಳ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಬೃಹತ್ ಯೋಜನೆ ಆಗಿದೆ ಎಂದು ತಿಳಿಸಿದರು.
ಎಂ.ಬಿ.ಲಕ್ಷ್ಮಿನರಸಿಂಹಯ್ಯ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಅತೀಕ್‍ಪಾಷ, ಇಒ ಜಿ.ವಿ.ರಮೇಶ್, ಸೀತಮ್ಮಆಂಜಿನಪ್ಪ, ಗೌತಮಿ ವಿಜಯಗೋಪಾಲರೆಡ್ಡಿ, ಡಿ.ಎಂ.ವೆಂಕಟೇಶಪ್ಪ, ಮಂಜುನಾಥರೆಡ್ಡಿ, ಲಕ್ಷ್ಮಿನರಸಿಂಹಪ್ಪ, ವಿಜಯಗೋಪಾಲರೆಡ್ಡಿ, ಎ.ವಿ.ಪೂಜಪ್ಪ, ಅಶ್ವತ್ಥಪ್ಪ, ನಾರಾಯಣಸ್ವಾಮಿ, ನಂದೀಶ್, ಸಿ.ಎಸ್.ಶ್ರೀನಿವಾಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.