
ಆಲ್ದೂರು: ಸಮೀಪದ ಕೆಳಗೂರು ಗ್ರಾಮದಲ್ಲಿ ಶಬರಿಮಲೆ ಯಾತ್ರೆಗೆ ಹೊರಟಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಬ್ಯಾರಿ ಮುಸ್ಲಿಮರು ಫಲಹಾರ ನೀಡಿ ಬೀಳ್ಕೊಟ್ಟರು.
ಈ ವೇಳೆ ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎ.ಯು.ಇಬ್ರಾಹಿಂ ಮಾತನಾಡಿ, ಬದುಕುವಾಗ ನೆರೆಯ ಪರಿಸರದಲ್ಲಿ ಎಲ್ಲರೂ ಕೂಡ ಸಹೋದರತ್ವದಿಂದ ಬಾಳ್ವೆ ನಡೆಸುತ್ತೇವೆ. ಸುಖ ದುಃಖಗಳಲ್ಲಿ ಭಾಗಿಯಾಗುತ್ತೇವೆ. ಧರ್ಮಗಳು, ತತ್ವಗಳು, ಸಿದ್ದಾಂತಗಳು, ವಿಭಿನ್ನವಾದರೂ ಅವುಗಳ ಸಾರುವ ಸಾರ ಒಂದೇ ಆಗಿದ್ದು ಎಲ್ಲರೂ ಪರಮಾತ್ಮನ ಸನ್ನಿಧಿಗೆ ಹೋಗುವ ವಿಳಾಸಗಳು ಬೇರೆ ಬೇರೆ ಅಷ್ಟೇ. ಸೌಹಾರ್ದ, ಸಹೋದರತ್ವದಿಂದ ಶಾಂತಿಯುತ ಸಮಾಜವನ್ನು ನಿರ್ಮಿಸೋಣ ಎಂದು ಮನವಿ ಮಾಡಿದರು.
ಗುರುಸ್ವಾಮಿಗಳಾದ ಸತೀಶ್ ಮಡೆ ನೇರಲು, ಪೂರ್ಣೇಶ್ ಕೆಳಗೂರು ನೇತೃತ್ವದಲ್ಲಿ ಶಬರಿಮಲೆ ಯಾತ್ರೆಗೆ ಹೊರಟಿದ್ದ 30 ಮಂದಿ ಅಯ್ಯಪ್ಪ ಮಾಲಾಧಾರಿಗಳಿಗೆ ಹಣ್ಣಿನ ಬುಟ್ಟಿ ಮತ್ತು ಕುಡಿಯುವ ನೀರಿನ ಬಾಟಲ್‌ಗಳನ್ನು ನೀಡಿ ಪ್ರಯಾಣಕ್ಕೆ ಶುಭ ಹಾರೈಸಲಾಯಿತು.
ಬ್ಯಾರಿ ಒಕ್ಕೂಟದ ಉಪಾಧ್ಯಕ್ಷರಾದ ಇಸಾಕ್, ಖಜಾಂಚಿ ಇಬ್ರಾಹಿಂ ಶಾಲಿಮಾರ್, ಸಮುದಾಯದ ಹಿರಿಯ ಮುಖಂಡರಾದ ಎ.ಕೆ.ಇಸ್ಮಾಯಿಲ್, ಸ್ಥಳೀಯ ಮುಖಂಡರಾದ ಮುಳ್ಳುಂಡೆ ಮಂಜುನಾಥ್, ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.