
ಪ್ರಜಾವಾಣಿ ವಾರ್ತೆಬಾಳೆಹೊನ್ನೂರು: ಅನುಮತಿ ಇಲ್ಲದೆ ಸರ್ಕಾರಿ ಕಟ್ಟಡ, ಸಾರ್ವಜನಿಕ ಜಾಗಗಳ ಮೇಲೆ ಡ್ರೋನ್ ಹಾರಿಸಿ ಚಿತ್ರೀಕರಣ ನಡೆಸಿದ ಆರೋಪದ ಅಡಿಯಲ್ಲಿ ಎರಡು ಡ್ರೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆಲವು ದಿನಗಳಿಂದ ಬಾಳೆಹೊನ್ನೂರು, ಕಡಬಗೆರೆ, ಹೇರೂರು ಮುಂತಾದ ಕಡೆಗಳಲ್ಲಿ ಸಂಜೆ ವೇಳೆ ದೊಡ್ಡ ಡ್ರೋನ್ ಹಾರಾಟವನ್ನು ಕಂಡ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅನುಮತಿ ಪಡೆಯದೆ ಹಾರಾಟ ನಡೆಸಿ ಆತಂಕ ಸೃಷ್ಟಿಸಿದ ಆರೋಪದ ಅಡಿ ಎರಡು ಡ್ರೋನ್‌ಗಳನ್ನು ವಶಪಡಿಸಿಕೊಂಡಿದ್ದು, ಇನ್ನೊಂದು ಡ್ರೋನ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.