
ತರೀಕೆರೆ: ಬನದ ಹುಣ್ಣಿಮೆ ಪ್ರಯುಕ್ತ ತಾಲ್ಲೂಕು ದೇವಾಂಗ ಸಮಾಜ ಮತ್ತು ಶ್ರೀಬನಶಂಕರಿ ದೇವಸ್ಥಾನ ಸೇವಾ ಸಂಘದ ಆಶ್ರಯದಲ್ಲಿ, ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನಲ್ಲಿರುವ ಶ್ರೀಬನಶಂಕರಿ ದೇವಿಯ 12ನೇ ವರ್ಷದ ರಥೋತ್ಸವ ಶನಿವಾರ ಅದ್ಧೂರಿಯಾಗಿ ಜರುಗಿತು.
ಈ ರಥೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಬಂದ ಭಕ್ತರು, ಬನಶಂಕರಿ ದೇವಿಯ ಮೂರ್ತಿಯನ್ನು ಕುಳ್ಳಿರಿಸಿದ ರಥಕ್ಕೆ ಬಾಳೆಹಣ್ಣು, ಕಿತ್ತಲೆ ಮೊದಲಾದ ಹಣ್ಣುಗಳನ್ನು ಎಸೆಯವುದರ ಮೂಲಕ ತಮ್ಮ ಭಕ್ತಿಭಾವ ಅರ್ಪಿಸಿ ಪೂಜೆ–ಹರಕೆಗಳನ್ನು ಸಲ್ಲಿಸಿದರು.
ರಥೋತ್ಸವದ ಧ್ವಜದ ಹರಾಜು ಪ್ರಕ್ರಿಯೆಯಲ್ಲಿ ಪಟ್ಟಣದ ಪುರಸಭಾ ಮಾಜಿ ಸದಸ್ಯ ಪದ್ಮರಾಜ್ ಅವರು ₹1.17 ಲಕ್ಷಕ್ಕೆ ಧ್ವಜವನ್ನು ತಮ್ಮದಾಗಿಸಿಕೊಂಡರು. ಪ್ರತಿವರ್ಷ ನಡೆಯುವ ಈ ಧಾರ್ಮಿಕ ಕಾರ್ಯದಲ್ಲಿ, ಮುಂದಿನ ಬಾರಿ ನಡೆಯುವ ರಥೋತ್ಸವದ ಮೊದಲ ಪೂಜೆ ಮತ್ತು ಕಳಸಾರೋಹಣ ಕಾರ್ಯಕ್ರಮ ಇವರದ್ದಾಗಿರುತ್ತದೆ.
ಶುಕ್ರವಾರ (ಜ. 2) ಬೆಳಿಗ್ಗೆ ಚಂಡಿಕಾ ಹೋಮ ಮತ್ತು ಮಧ್ಯಾಹ್ನ ಪೂರ್ಣಾಹುತಿ ಜರುಗಿತು. ಶುಕ್ರವಾರ ಮತ್ತು ಶನಿವಾರ ಸಂಜೆ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಪುರಸಭಾ ಅಧ್ಯಕ್ಷ ವಸಂತಕುಮಾರ್, ಸದಸ್ಯೆಯರಾದ ದಿವ್ಯ ರವಿ, ಆಶಾ ಅರುಣ್‍ಕುಮಾರ್, ದೇವಾಂಗ ಸಮಾಜ ಮತ್ತು ದೇವಸ್ಥಾನ ಸಮಿತಿ ಅಧ್ಯಕ್ಷ ಸಪ್ತಗಿರಿ ವೆಂಕಟೇಶ್, ದೇವಸ್ಥಾನದ ಸ್ಥಳ ದಾನಿಗಳಾದ ಶ್ರೀಮತಿ ಗಿರಿಜಮ್ಮ ನಾಗರಾಜ್, ಟಿ.ಆರ್. ನಾಗರಾಜ್, ಪುರಸಭಾ ಮಾಜಿ ಅಧ್ಯಕ್ಷೆ ಅಶ್ವಿನಿ, ಸಮಾಜದ ಮುಖಂಡರಾದ ಶಂಕರಣ್ಣ, ಟಿ.ಎನ್. ವಿಶುಕುಮಾರ್, ಜಯಣ್ಣ, ಶಂಕರ್, ಶೇಖರಣ್ಣ, ಪಾರ್ವತಮ್ಮ ನಾಗರಾಜ್, ಎನ್.ಆರ್.ಎಚ್. ನಾಗರಾಜ್, ಕುಮಾರ್, ಸಪ್ತಗಿರಿ ಲೋಕೇಶ್ ಮತ್ತು ಮಂಜುನಾಥ್, ಕಿಟ್ಟಣ್ಣ, ಟಿ.ಆರ್. ನಾಗರಾಜ ಇದ್ದರು.