ADVERTISEMENT

ಗಣಪತಿ, ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 15:52 IST
Last Updated 5 ಸೆಪ್ಟೆಂಬರ್ 2024, 15:52 IST
ಶೃಂಗೇರಿಯ ಜಿಎಸ್‍ಬಿ ಸಭಾಂಗಣದಲ್ಲಿ ಆಯೋಜಿಸಿದ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಸಲುವಾಗಿ ಆಯೋಜಿಸಿದ ಶಾಂತಿ ಸಮಿತಿ ಸಭೆಯಲ್ಲಿ ಸಬ್ ಇನ್‍ಸ್ಪೆಕ್ಟರ್ ಜಕ್ಕಣ್ಣವರ್ ಮಾತನಾಡಿದರು
ಶೃಂಗೇರಿಯ ಜಿಎಸ್‍ಬಿ ಸಭಾಂಗಣದಲ್ಲಿ ಆಯೋಜಿಸಿದ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಸಲುವಾಗಿ ಆಯೋಜಿಸಿದ ಶಾಂತಿ ಸಮಿತಿ ಸಭೆಯಲ್ಲಿ ಸಬ್ ಇನ್‍ಸ್ಪೆಕ್ಟರ್ ಜಕ್ಕಣ್ಣವರ್ ಮಾತನಾಡಿದರು   

ಶೃಂಗೇರಿ: ‘ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದ, ವಿಸರ್ಜನೆವರೆಗೆ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಸಂಪೂರ್ಣ ಜವಬ್ದಾರಿ, ಆಯೋಜಕರದ್ದೇ ಅಗಿರುತ್ತದೆ. ಯಾವುದೇ ಗೊಂದಲವಿಲ್ಲದೇ ಅಚ್ಚುಕಟ್ಟಾಗಿ ಹಬ್ಬ ಆಚರಿಸಬೇಕು’ ಎಂದು  ಸಬ್‌ ಇನ್‌ಸ್ಪೆಕ್ಟರ್‌ ಭರಮಪ್ಪ ಬೆಳಗಲಿ ಹೇಳಿದರು.

ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಸಲುವಾಗಿ ಆಯೋಜಿಸಿದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಸುಮಾರು 48 ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಧ್ವನಿವರ್ಧಕದ ಪರವಾನಿಗೆಯನ್ನು ಹಾಗೂ ಕಾರ್ಯಕ್ರಮ ನಡೆಸುವ ಪರವಾನಗಿಯನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದುಕೊಳ್ಳಬೇಕು. ಮೂರ್ತಿ ವಿಸರ್ಜನೆ ಮಾಡುವಾಗ ಕರ್ಕಶವಾದ ಸಂಗೀತ  ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು. ಮೂರ್ತಿಯೊಂದಿಗೆ ನದಿ, ಕೆರೆಗಳಿಗೆ ಇಳಿಯುವಾಗ ಜಾಗರೂಕತೆ ಅಗತ್ಯ. ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳ ಮೊಬೈಲ್ ನಂಬರ್‌ ಮತ್ತಿತರ ವಿವರಗಳನ್ನು ಮುಂಚಿತವಾಗಿಯೇ ಠಾಣೆಗೆ ನೀಡಬೇಕು ಎಂದರು.

ADVERTISEMENT

ಸಭೆಯಲ್ಲಿ ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷರು, ತಾಲ್ಲೂಕಿನ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಜಾಮೀಯ ಮಸೀದಿ ಮತ್ತು ಆಲ್ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

ಶಾಂತಿಯುತವಾಗಿ ಹಬ್ಬ ಆಚರಿಸಲು ಪೊಲೀಸ್ ಇಲಾಖೆಯೊಂದಿಗೆ ಸಂಘಟಕರು ಸಹಕರಿಸಬೇಕು. ಯಾವುದೇ ಸಂದರ್ಭ ಸಮಸ್ಯೆ, ವ್ಯಾಜ್ಯ, ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡಿ’ ಎಂದು ಸಬ್‌ ಇನ್‌ಸ್ಪೆಕ್ಟರ್‌ ಜಕ್ಕಣ್ಣವರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.