ಡಿ.ಕೆ.ಶಿವಕುಮಾರ್ ಭಾವಚಿತ್ರಕ್ಕೆ ಮೊಟ್ಟೆ ಎಸೆದ BJP ಕಾರ್ಯಕರ್ತರು
ಚಿಕ್ಕಮಗಳೂರು: ಸಂವಿಧಾನದ ಬದಲಾವಣೆ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಇದ್ದ ಪೋಸ್ಟರ್‌ಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಂಗಳವಾರ ಬಿಜೆಪಿ ನಗರ ಮಂಡಲದಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು.
ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಲು ಕಾರ್ಯಕರ್ತರು ಮುಂದಾದರು. ಪೊಲೀಸರು ಇದಕ್ಕೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಕೆಲವರು ಬೇಲೂರು ರಸ್ತೆ ಕಡೆಗೆ ಹೋಗಿ ‘ಎಲ್ಲಿದ್ದ ಆನ್ನಭಾಗ್ಯ ಯೋಜನೆ’ ಪೋಸ್ಟರ್‌ನಲ್ಲಿ ಡಿ.ಕೆ.ಶಿವಕುಮಾರ್ ಚಿತ್ರಕ್ಕೆ ಮೊಟ್ಟೆ ಎಸೆದರು. ಪೊಲೀಸರು ಅವರನ್ನೂ ತಡೆಯಲು ಯತ್ನಿಸಿದರು. ದೂರದಿಂದಲೇ ಕಾರ್ಯಕರ್ತನೊಬ್ಬ ಮೊಟ್ಟೆ ಎಸೆದ. ಬಳಿಕ ಪೊಲೀಸರು ಅಲ್ಲಿಂದ ಎಲ್ಲರನ್ನೂ ವಾಪಸ್ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.