ADVERTISEMENT

ಮುಳ್ಳಯ್ಯನಗಿರಿ ಪ್ರವಾಸ: ಸೆ.1ರಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 14:20 IST
Last Updated 28 ಆಗಸ್ಟ್ 2025, 14:20 IST
ಮುಳ್ಳಯ್ಯನಗಿರಿ 
ಮುಳ್ಳಯ್ಯನಗಿರಿ    

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಬರುವ ಪ್ರವಾಸಿಗರು ಇನ್ಮುಂದೆ ‌ಆನ್‌ಲೈನ್‌ನಲ್ಲಿ ಮೊದಲೇ ಬುಕ್ಕಿಂಗ್ ಮಾಡಿಕೊಂಡು ಬರಬೇಕು. ಸೆಪ್ಟೆಂಬರ್‌ 1ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪ್ರವಾಸಿ ತಾಣಗಳಲ್ಲಿ ದಟ್ಟಣೆ ಉಂಟಾಗುತ್ತಿದ್ದು, ಇದನ್ನು ನಿಯಂತ್ರಿಸಲು  ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಜಿಲ್ಲಾಡಳಿತದ ವೆಬ್‌ಸೈಟ್‌ ಲಿಂಕ್ (https://chikkamagaluru.nic.in/en/tourism) ಬಳಸಿ ಶುಲ್ಕ (ಬೈಕ್‌ಗಳಿಗೆ ₹50, ಕಾರುಗಳಿಗೆ ₹100, ತೂಫಾನ್‌ ವಾಹನ ₹150 ಮತ್ತು ಟೆಂಪೊ ಟ್ರಾವೆಲರ್‌ ₹200) ಪಾವತಿಸಿ ದಿನಾಂಕ ಮತ್ತು ಸಮಯವನ್ನು ಮೊದಲೇ ಬುಕ್ಕಿಂಗ್ ಮಾಡಿಕೊಳ್ಳಬೇಕು.

ADVERTISEMENT

ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ತನಕ ಮೊದಲ ಅವಧಿ ಮತ್ತು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆ ತನಕ ಎರಡನೇ ಅವಧಿ ಎಂದು ಸಮಯ ನಿಗದಿ ಮಾಡಲಾಗಿದೆ. ಒಂದು ಅವಧಿಗೆ 600 ವಾಹನಗಳಿಗೆ(ದ್ವಿಚಕ್ರ ವಾಹನ/ಆಟೊರಿಕ್ಷಾ 100, ಸ್ಥಳೀಯ ಟ್ಯಾಕ್ಸಿ 100, ಟೆಂಪೊ ಟ್ರಾವೆಲರ್ 50, ತೂಫಾನ್ ವಾಹನ 50, ಪ್ರವಾಸಿಗರ ಕಾರು/ಜೀಪು/ಎಸ್‌ಯುವಿ 300) ಅವಕಾಶ ಇರಲಿದೆ ಮೊದಲು ಬುಕ್ಕಿಂಗ್ ಮಾಡಿಕೊಂಡವರಿಗೆ ಅವಕಾಶ ದೊರಕಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.