ತರೀಕೆರೆ: ಅಲ್ಲಲ್ಲಿ ಒಂದೆರಡು ಮಳೆ ಲಭಿಸಿದ್ದು, ಕಾಫಿ ತೋಟಗಳಲ್ಲಿ ಕಾಫಿ ಹೂವು ಅರಳಿದೆ. ಪಟ್ಟಣದಿಂದ ಸಂತವೇರಿ ಮಾರ್ಗವಾಗಿ ಚಿಕ್ಕಮಗಳೂರು ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಸ್ತೆಯ ಇಕ್ಕೆಲಗಳಲ್ಲಿ ಕಾಫಿ ಹೂವಿನ ಪರಿಮಳ ಸವಿಯುವುದು ಮತ್ತು ಸೌಂದರ್ಯ ಆಸ್ವಾದಸಿವುದು ನಯನ ಮನೋಹರ ದೃಶ್ಯವಾಗಿದೆ, ತೋಟಗಳಲ್ಲಿ ಮಲ್ಲಿಗೆ ಹೂವಿನ ರಾಶಿ ಚೆಲ್ಲಿದಂತೆ ಕಾಣುತ್ತಿದೆ.
ತರೀಕೆರೆ ತಾಲ್ಲೂಕು, ಲಿಂಗದಹಳ್ಳಿ ಹೋಬಳಿಯ ಹಲವು ಪ್ರದೇಶಗಳಲ್ಲಿ ಕಾಫಿ ತೋಟಗಳಿವೆ. ಈ ಬಾರಿ ಬಿರು ಬಿಸಿಲಿನಿಂದಾಗಿ ತೋಟಗಳಿಗೆ ನೀರಿನ ಕೊರತೆ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ ತೋಟದಲ್ಲಿ ಹೂವು ಅರಳಿವೆ. ಕಾಫಿ ಗಿಡದ ತುಂಬಾ ಹೂ ಬಿಟ್ಟಿರುವುದರಿಂದ ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆ ಇದೆ ಎನ್ನುತ್ತಾರೆ ಬೆಳೆಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.